ಎಸ್​ಬಿಐ ಜತೆ ಸಹವರ್ತಿ ಬ್ಯಾಂಕ್​ಗಳ ವಿಲೀನಕ್ಕೆ ವಿರೋಧ, ನೋಟು ಬ್ಯಾನ್​​​​ ವೇಳೆ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆ ನೀಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕುಗಳು ನಾಳೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ನವದೆಹಲಿ(ಫೆ.27): ಎಸ್​ಬಿಐ ಜತೆ ಸಹವರ್ತಿ ಬ್ಯಾಂಕ್​ಗಳ ವಿಲೀನಕ್ಕೆ ವಿರೋಧ, ನೋಟು ಬ್ಯಾನ್​​​​ ವೇಳೆ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆ ನೀಡಿಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಕೃತ ಬ್ಯಾಂಕುಗಳು ನಾಳೆ ದೇಶವ್ಯಾಪಿ ಮುಷ್ಕರಕ್ಕೆ ಕರೆ ನೀಡಿವೆ.

ಹೀಗಾಗಿ ನಾಳೆ ಬ್ಯಾಂಕಿಂಗ್ ಸೇವೆ ಬಹುತೇಕ ಸ್ತಬ್ಧವಾಗಲಿದೆ. ಎಟಿಎಂ ಸೇವೆಯಲ್ಲೂ ವ್ಯತ್ಯಯ ಉಂಟಾಗಲಿದೆ. ಯುಎಫ್​ಬಿಯು ಅಡಿ ಒಟ್ಟು 9 ಬ್ಯಾಂಕ್​ಗಳ ಸಂಘಟನೆಗಳು ಮುಷ್ಕರ ಬೆಂಬಲಿಸಿದ್ದು, ದೇಶವ್ಯಾಪಿ 10 ಲಕ್ಷಕ್ಕೂ ಅಧಿಕ ಬ್ಯಾಂಕ್ ಅಧಿಕಾರಿ ಹಾಗೂ ಸಿಬ್ಬಂದಿ ಮುಷ್ಕರದಲ್ಲಿ ಭಾಗವಹಿಸಲಿದ್ದಾರೆ.

ಭಾರತೀಯ ಮಜ್ದೂರ್ ಸಂಘಕ್ಕೆ ಸೇರಿದ ಬ್ಯಾಂಕ್ ನೌಕರರ ರಾಷ್ಟ್ರೀಯ ಸಂಘಟನೆ ಹಾಗೂ ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಘಟನೆ ಮುಷ್ಕರದಿಂದ ದೂರ ಉಳಿದು ಬಾಹ್ಯ ಬೆಂಬಲ ಸೂಚಿಸಿರುವುದಾಗಿ ತಿಳಿದು ಬಂದಿದೆ. ದೆಹಲಿಯಲ್ಲಿ ಫೆ.21ರಂದು ಕೇಂದ್ರ ಸರ್ಕಾರದ ಮುಖ್ಯಕಾರ್ವಿುಕ ಆಯುಕ್ತರ ಸಮ್ಮುಖದಲ್ಲಿ ನಡೆದ ಸಂಧಾನಸಭೆ ವಿಫಲಗೊಂಡಿರುವ ಹಿನ್ನೆಲೆಯಲ್ಲಿ ಫೆ.28ಕ್ಕೆ ಮುಷ್ಕರಕ್ಕೆ ಕರೆ ನೀಡಲಾಗಿದೆ.

ಪ್ರಮುಖ ಬೇಡಿಕೆಗಳು

-20 ಲಕ್ಷ ರೂ. ಗ್ರ್ಯಾಚುಟಿ ಕಾಯ್ದೆಗೆ ತಿದ್ದುಪಡಿ ತರಬೇಕು

-ಪೂರ್ವಾನ್ವಯ ಆಗುವಂತೆ 20 ಲಕ್ಷ ರೂ. ಸಿಗುವಂತೆ ಮಾಡಬೇಕು

-ಗ್ರ್ಯಾಚುಟಿ ಮೇಲಿನ ತೆರಿಗೆ ವಾಪಸ್, ಐಡಿಬಿಐ ಬ್ಯಾಂಕ್​ಗಳ ವೇತನ ಪರಿಷ್ಕರಣೆ

-ಸ್ಟೇಟ್​​ ಬ್ಯಾಂಕ್ ಆಫ್ ಇಂಡಿಯಾ ಜತೆ ಸಹವರ್ತಿ ಬ್ಯಾಂಕ್​ಗಳ ವಿಲನಕ್ಕೆ ಖಂಡನೆ

-ನೋಟ್​ ಬ್ಯಾನ್​​ ವೇಳೆ ಹೆಚ್ಚುವರಿ ಕೆಲಸಕ್ಕೆ ವಿಶೇಷ ಭತ್ಯೆಗೆ ಬೇಡಿಕೆ

-ಹೊಸ ಕಾರ್ವಿುಕ ನೀತಿಗೆ ವಿರೋಧ

-ವಸೂಲಾಗದ ಸಾಲಕ್ಕೆ ಉನ್ನತ ಅಧಿಕಾರಿಗಳ ಹೊಣೆಗಾರಿಕೆ

-ಹೊರಗುತ್ತಿಗೆ ಹೆಚ್ಚಳ ಮಾಡುವ ನಿರ್ಧಾರ ಕೈಬಿಡಬೇಕು

ಶೇ.90 ಬ್ಯಾಂಕ್ ಬಂದ್

ಸ್ಟೇಟ್ ಬ್ಯಾಂಕ್ ಗ್ರೂಪ್, ಕಾಪೋರೇಷನ್ ಬ್ಯಾಂಕ್, ಕೆನರಾ ಬ್ಯಾಂಕ್, ಐಡಿಬಿಐ ಬ್ಯಾಂಕ್, ಎಸ್​ಬಿಐ, ಎಸ್​ಬಿಎಂ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕರ್ನಾಟಕ ಬ್ಯಾಂಕ್ ಸೇರಿ ಎಲ್ಲ ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹವರ್ತಿ ಬ್ಯಾಂಕ್​ಗಳು ಸೇರಿ ಒಟ್ಟಾರೆ ಶೇ.90 ಬ್ಯಾಂಕ್​ಗಳು ಮುಷ್ಕರದಲ್ಲಿ ಪಾಲ್ಗೊಳ್ಳಲಿವೆ. ಐಸಿಐಸಿಐ, ಎಚ್​ಡಿಎಫ್​ಸಿ, ಆಕ್ಸಿಸ್, ಕೊಟಕ್ ಮಹೀಂದ್ರ ಸೇರಿ ಹೊಸ ಬ್ಯಾಂಕ್​ಗಳು ಎಂದಿನಂತೆ ಕೆಲಸ ನಿರ್ವಹಿಸಲಿವೆ.