ಮುಂದಿನ ಗುರುವಾರದಿಂದ ನಾಲ್ಕು ದಿನಗಳ ಕಾಲ ದೀರ್ಘಾವಧಿ ಸರ್ಕಾರಿ ರಜೆ ಇರುವ ಕಾರಣ ಯಾವುದೇ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುದಿಲ್ಲ.

ನವದೆಹಲಿ (ಮಾ. 22): ಮುಂದಿನ ಗುರುವಾರದಿಂದ ನಾಲ್ಕು ದಿನಗಳ ಕಾಲ ದೀರ್ಘಾವಧಿ ಸರ್ಕಾರಿ ರಜೆ ಇರುವ ಕಾರಣ ಯಾವುದೇ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುದಿಲ್ಲ.

ಹಾಗಾಗಿ, ಯಾವುದೇ ಬ್ಯಾಂಕಿಂಗ್‌ಗೆ ಸಂಬಂಧಿಸಿದ ಮತ್ತು ಸರ್ಕಾರಿ ಕಚೇರಿಯಲ್ಲಿನ ಕೆಲಸಗಳನ್ನು ಮುಂದಿನ ಗುರುವಾರದ ಒಳಗಾಗಿ ಗ್ರಾಹಕರು ಮತ್ತು ಸಾರ್ವಜನಿಕರು ಮುಗಿಸಿಕೊಳ್ಳುವುದು ಒಳಿತು. ಇಲ್ಲದಿದ್ದರೆ, ಏಪ್ರಿಲ್‌ 2ರವರೆಗೂ ಕಾಯಬೇಕಾಗುವ ಅನಿವಾರ್ಯತೆ ಎದುರಾಗಲಿದೆ. ಮಾ.29 ಗುರುವಾರ ಮಹಾವೀರ ಜಯಂತಿ, ಮಾ.30ರಂದು ಶುಕ್ರವಾರ (ಗುಡ್‌ಫ್ರೈಡೆ) ಮತ್ತು ಮಾ.31 ತಿಂಗಳ ಕೊನೆಯ ಶನಿವಾರ ಮತ್ತು ಹನುಮ ಜಯಂತಿ ಇರುವ ಕಾರಣದಿಂದಾಗಿ ಯಾವುದೇ ಬ್ಯಾಂಕ್‌ಗಳು ಮತ್ತು ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಣೆ ಮಾಡುವುದಿಲ್ಲ.