ಡಿಜಿಟಲ್ ವಹಿವಾಟು ಉತ್ತೇಜಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಬ್ಯಾಂಕ್ ಚೆಕ್‌'ಗಳ ಸೇವೆಯನ್ನು ಹಿಂದಕ್ಕೆ ಪಡೆಯಬಹುದು ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್‌'ವಾಲ್ ಹೇಳಿದ್ದಾರೆ.
ಭೋಪಾಲ್(ನ.17): ಡಿಜಿಟಲ್ ವಹಿವಾಟನ್ನು ಉತ್ತೇಜಿಸುವ ಸಲುವಾಗಿ ಕೇಂದ್ರ ಸರ್ಕಾರ ಸದ್ಯದಲ್ಲೇ ಬ್ಯಾಂಕ್ ಚೆಕ್'ಗಳನ್ನು ಹಿಂಪಡೆಯುವ ಸಾಧ್ಯತೆ ಇದೆ ಎಂದು ಅಖಿಲ ಭಾರತ ಕೈಗಾರಿಕಾ ಒಕ್ಕೂಟ (ಸಿಎಐಟಿ)ದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಡಿಜಿಟಲ್ ವಹಿವಾಟು ಉತ್ತೇಜಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರ ಭಾಗವಾಗಿ ಸರ್ಕಾರ ಮುಂದಿನ ದಿನಗಳಲ್ಲಿ ಬ್ಯಾಂಕ್ ಚೆಕ್'ಗಳ ಸೇವೆಯನ್ನು ಹಿಂದಕ್ಕೆ ಪಡೆಯಬಹುದು ಎಂದು ಸಿಎಐಟಿ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್'ವಾಲ್ ಹೇಳಿದ್ದಾರೆ.
ವ್ಯಾಪಾರಸ್ಥರು ವಿವಿಧ ರೀತಿಯ ಡಿಜಿಟಲ್ ವಹಿವಾಟಿನಲ್ಲಿ ತೊಡಗುವುದನ್ನು ಪ್ರೋತ್ಸಾಹಿಸಲು ಮಾಸ್ಟರ್ ಕಾರ್ಡ್ ಮತ್ತು ಸಿಎಐಟಿ ಜಂಟಿಯಾಗಿ ಕೈಗೊಂಡಿರುವ ‘ಡಿಜಿಟಲ್ ರಥ್’ ಅಭಿಯಾನಕ್ಕೆ ಗುರುವಾರ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಖಂಡೇಲ್'ವಾಲ್, ಬ್ಯಾಂಕುಗಳು ಡೆಬಿಟ್ ಕಾರ್ಡ್ಗೆ ಶೇ.1ರಷ್ಟು ಮತ್ತು ಕ್ರೆಡಿಟ್ ಕಾರ್ಡ್'ಗೆ ಶೇ.2ರಷ್ಟು ಶುಲ್ಕ ವಿಧಿಸುತ್ತಿವೆ. ಸರ್ಕಾರ ನೇರವಾಗಿ ಸಬ್ಸಿಡಿ ಒದಗಿಸುವ ಮೂಲಕ ಈ ಶುಲ್ಕ ಮನ್ನಾ ಮಾಡಬಹುದು ಎಂದಿದ್ದಾರೆ.
