ಬೆಂಗಳೂರಿನಲ್ಲೂ ನೀರವ್​ ಮೋದಿ ಮಾದರಿಯಲ್ಲಿ ಅಕ್ರಮ; 25 ಕೋಟಿ ರೂ ಪಂಗನಾಮ

First Published 22, Mar 2018, 7:51 AM IST
Bank Cheating in Bengaluru
Highlights

ಬೆಂಗಳೂರಿನಲ್ಲಿ  ನೀರವ್ ಮೋದಿಯಂತೆ ಇನ್ನೊಬ್ಬ ವಂಚಕ  ಸಿಕ್ಕಿದ್ದಾನೆ. ಸಾವಿರಾರು ಕೋಟಿ ವಂಚನೆ ಮಾಡಿ  ಪರಾರಿಯಾಗಿರುವ ನೀರವ್​ ಮೋದಿ ಮಾದರಿಯಲ್ಲಿ ಬ್ಯಾಂಕ್​ ವಂಚನೆ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಬೆಂಗಳೂರು (ಮಾ. 22):  ಬೆಂಗಳೂರಿನಲ್ಲಿ  ನೀರವ್ ಮೋದಿಯಂತೆ ಇನ್ನೊಬ್ಬ ವಂಚಕ  ಸಿಕ್ಕಿದ್ದಾನೆ. ಸಾವಿರಾರು ಕೋಟಿ ವಂಚನೆ ಮಾಡಿ  ಪರಾರಿಯಾಗಿರುವ ನೀರವ್​ ಮೋದಿ ಮಾದರಿಯಲ್ಲಿ ಬ್ಯಾಂಕ್​ ವಂಚನೆ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ನಕಲಿ ದಾಖಲೆ ಸೃಷ್ಟಿ ಮಾಡಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ. ಬ್ಯಾಂಕ್​ ಅಧಿಕಾರಿಗಳು, ದೇವನಹಳ್ಳಿ ಸಬ್​ ರಿಜಿಸ್ಟ್ರಾರ್​ ಕಚೇರಿಯ ಅಧಿಕಾರಿಗಳು ಬಿಲ್ಡರ್​ ಒಬ್ಬನ ಜೊತೆ ಸೇರಿ ವಂಚನೆ ಮಾಡಿದ್ದಾರೆ. ಬೆಂಗಳೂರಿನ ಸಹಕಾರ ನಗರದ ನಿವಾಸಿ ಕೆ.ಮುನಿರಾಜು ಹಾಗೂ ಆತನ ಪತ್ನಿ ಪುಷ್ಟ ಎಂಬುವವರು ಸೇರಿ ಬ್ಯಾಂಕ್​ಗೆ 25 ಕೋಟಿ ರೂಪಾಯಿ ಟೋಪಿ ಹಾಕಿದ್ದಾರೆ. ಈ ಸಂಬಂಧ ದಾಖಲೆಗಳನ್ನು ಕಲೆ ಹಾಕಿರುವ ಆರ್​ಟಿಐ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ ಸಿಬಿಐಗೆ ದೂರು ಸಲ್ಲಿಸಿದ್ದಾರೆ.

ಈ ಕಂಪನಿ ಆಸ್ತಿಯ ನಕಲಿ ದಾಖಲೆ ಸೃಷ್ಟಿ  ಮಾಡಿ ಬ್ಯಾಂಕ್​ಗೆ ಅಡಮಾನ ಮಾಡಿ 25 ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ. ಈ ವಂಚನೆಯಲ್ಲಿ ಹೆಬ್ಬಾಳದ ಕೆನರಾ ಬ್ಯಾಂಕ್​​ ಸಿಬ್ಬಂದಿ, ದೇವನಹಳ್ಳಿ ಸಬ್​ ರಿಜಿಸ್ಟ್ರಾರ್​ ಕಚೇರಿ ಸಿಬ್ಬಂದಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಬೆಳಕಿಗೆ ಬಂದಿದೆ. ಈಗಾಗಲೇ 500 ಪುಟಗಳ ದಾಖಲೆ ಸಮೇತ ಸಿಬಿಐ ಎಸ್​​ಪಿ ರೂಪ ಅವರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಸಿಬಿಐ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.  
 

loader