ಬೆಂಗಳೂರು: ಪತಿ ಅನಾರೋಗ್ಯದ ಹಿನ್ನೆಲೆಯಲ್ಲಿ ಸಾಲ ತೀರಿಸಲು ತುಸು ಕಾಲಾವಕಾಶ ನೀಡುವಂತೆ ಕೇಳಿದ ಮಹಿ ಳೆಗೆ ನನ್ನ ಜತೆ ಸಹಕರಿಸು ಎಂದು ಕೇಳಿದ್ದ ಫೈನಾನ್ಷಿಯರ್ ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ದಾಸರಹಳ್ಳಿ ನಿವಾಸಿ ರಮೇಶ್ ರೈ(38) ಬಂಧಿತ. 

ಬಾಲಗುಂಟೆ ನಿವಾಸಿ ಸುಮಾರು 32 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಆರೋಪಿ ರಮೇಶ್ ರೈ ಸಣ್ಣ ಪ್ರಮಾಣದಲ್ಲಿ ಸಾಲ ನೀಡುತ್ತಿದ್ದ. ಸಂತ್ರಸ್ತ ಮಹಿಳೆ 8 ತಿಂಗಳ ಹಿಂದೆ ಆರೋಪಿ ಬಳಿ 2 ಲಕ್ಷ ಸಾಲ ಪಡೆದಿದ್ದ ರು. ಅ.23 ರಂದು ಮಹಿಳೆ ಆರೋಪಿ ರಮೇಶ್‌ನ ಕಚೇರಿ ಬಳಿ ಒಂದು ವಾರದ ಹಣ ಸಂದಾಯ ಮಾಡಿದ್ದೇನೆ. 

ಪತಿ ಗೆ ಅನಾರೋಗ್ಯವಾಗಿರುವ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ತೊಂದರೆಯಲ್ಲಿದ್ದು, ಸಾಲ ಸಂದಾಯ ಮಾಡಲು ಎರಡು ವಾರ ಕಾಲಾವಕಾಶ ನೀಡುವಂತೆ ಆರೋಪಿ ಬಳಿ ಗಡುವು ಕೇಳಿದ್ದರು. 

ಇದಕ್ಕೆ ಪ್ರತಿಕ್ರಿಯಿಸಿ ದ್ದ ರಮೇಶ್, ‘ನೀನು ನನ್ನ ಜತೆ ಸ್ವಲ್ಪ ಸಹಕರಿಸಿದರೆ, ಬಾಕಿ ಹಣವನ್ನು ಮನ್ನಾ ಮಾಡುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿದ್ದ’. ನೊಂದು ಪೊಲೀಸರಿಗೆ ದೂರು ನೀಡಿದ್ದಾರೆ.