ಫೆಬ್ರವರಿ 19ರಿಂದ ಏಪ್ರಿಲ್​ 30ರವರೆಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವವರು ನಾಲ್ಕು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪಿಕೊಳ್ಳಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರು(ಜ. 18)​: ರನ್​ ವೇ ಕಾಮಗಾರಿ ಹಿನ್ನೆಲೆಯಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಶ್ಚಿತ ಅವಧಿಯಲ್ಲಿ ಬಂದ್​ ಆಗಲಿದೆ. ಫೆಬ್ರವರಿ 19ರಿಂದ ಏಪ್ರಿಲ್​ 30ರವರೆಗೆ ಬೆಳಗ್ಗೆ 10.30ರಿಂದ ಸಂಜೆ 5 ಗಂಟೆಯವರೆಗೆ ವಿಮಾನ ನಿಲ್ದಾಣದ ಕಾರ್ಯನಿರ್ವಹಣೆ ಇರುವುದಿಲ್ಲ. ಏರ್'​ಪೋರ್ಟ್'​ನಲ್ಲಿನ ರನ್'​ವೇ ವಿಸ್ತರಣಾ ಕೆಲಸ ನಡೆಯಲಿರುವುದರಿಂದ ಬಂದ್​ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಆಗಮನ, ನಿರ್ಗಮನ ಇರುವುದಿಲ್ಲ.

ಇನ್ನು, ಫೆಬ್ರವರಿ 19ರಿಂದ ಏಪ್ರಿಲ್​ 30ರವರೆಗೆ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮಾಡುವವರು ನಾಲ್ಕು ಗಂಟೆ ಮುಂಚಿತವಾಗಿ ವಿಮಾನ ನಿಲ್ದಾಣ ತಲುಪಿಕೊಳ್ಳಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- ಶಶಿಶೇಖರ್, ಸುವರ್ಣನ್ಯೂಸ್