ಪುಲ್ವಾಮಾ ದಾಳಿ ನಡೆದ ಬೆನ್ನಲ್ಲೇ ಕಾಶ್ಮೀರದ ಪ್ರತ್ಯೇಕವಾದಿಗಳ ಆಟಾಟೋಪಗಳಿಗೆ ಕೇಂದ್ರ ಸರ್ಕಾರ ಹಂತ-ಹಂತವಾಗಿ ಬ್ರೇಕ್ ಹಾಕಲು ಮುಂದಾಗಿದೆ.
ನವದೆಹಲಿ, [ಮಾ.2]: ಗಡಿಯಲ್ಲಿ ಪುಂಡಾಟ ನಡೆಸುವ ಕಾಶ್ಮೀರದ ಪ್ರತ್ಯೇಕವಾದಿಗಳನ್ನು ಮಟ್ಟಹಾಕಲು ಕೇಂದ್ರ ಸರ್ಕಾರ ಟೊಂಕ ಕಟ್ಟಿ ನಿಂತಿದೆ.
ಪುಲ್ವಾಮಾ ದಾಳಿ ಬಳಿಕ ಗಡಿಯಲ್ಲಿರುವ ಕಾಶ್ಮೀರಿ ಪ್ರತ್ಯೇಕವಾದಿಗಳನ್ನು ಟಾರ್ಗೆಟ್ ಮಾಡಿರುವ ಕೇಂದ್ರ ಸರ್ಕಾರ, ಎರಡು ದಿನಗಳ ಹಿಂದೆಯಷ್ಟೇ ಜಮಾತ್ ಎ ಇಸ್ಲಾಂ ಸಂಘಟನೆ ನಿಷೇಧಿಸಲಾಗಿತ್ತು.
ಭಯೋತ್ಪಾದನೆ ನಮ್ಮ ಜನ್ಮಸಿದ್ಧ ಹಕ್ಕು: ಪುಲ್ವಾಮಾ ದಾಳಿ ಸಮರ್ಥಿಸಿಕೊಂಡ ಪಾಕ್ ಸಂಸದ!
ಇದೀಗ ಜಮಾತ್ ಎ ಇಸ್ಲಾಂನ 70 ನಾಯಕರ ಆಸ್ತಿ ಸೀಜ್ ಮಾಡಲಾಗಿದೆ. ಸುಮಾರು 4500 ಕೋಟಿ ರೂ.ಅಧಿಕ ಆಸ್ತಿ ಹೊಂದಿರುವ ಶಂಕಿಸಲಾಗಿದ್ದು, ಪುಲ್ವಾಮಾ ದಾಳಿಯ ಉಗ್ರರಿಗೆ ಹಣ ನೀಡಿದ ಆರೋಪ ಮೇಲೆ ಸೀಜ್ ಮಾಡಲಾಗಿದೆ.
ಅಷ್ಟೇ ಅಲ್ಲದೇ ಸೈನಿಕರ ಮೇಲೆ ಕಲ್ಲು ತೂರುವವರಿಗೂ ಗುಂಡೇಟಿನ ಖಡಕ್ ವಾರ್ನಿಂಗ್ ನೀಡಲಾಗಿದೆ. ಹೀಗೆ ಹಂತ-ಹಂತವಾಗಿ ಕಣುವೆ ಮೇಲೆ ಕೇಂದ್ರ ಸರ್ಕಾರ ನಿಗಾವಹಿಸಿದೆ.
