ಮೂರು ವರ್ಷವಾದ್ರು ಮಕ್ಕಳಾಗದ ಹಿನ್ನೆಲೆಯಲ್ಲಿ ವೈದ್ಯನಿಗೆ ಗಂಡಸುತನವೇ ಇಲ್ಲ ಎಂದು ಪತ್ನಿ ತಾಯಿ ಆರೋಪಿಸಿದ್ದರಂತೆ

ಬಳ್ಳಾರಿ(ನ.29): ಮದುವೆಯಾಗಿ ಎರಡು ಮಕ್ಕಳಿದ್ರೂ, ಮೂರನೇ ಮದುವೆಗೆ ಸಿದ್ದವಾಗಿದ್ದ ವೈದ್ಯನಿಗೆ ಮೊದಲ ಪತ್ನಿ ಆಸ್ಪತ್ರೆಯಲ್ಲೇ ಗೂಸಾ ನೀಡಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

 ಬಳ್ಳಾರಿಯ ನವೋದಯ ಆಸ್ಪತ್ರೆಯ ವೈದ್ಯ ರಾಮು ಎನ್ನುವ ವ್ಯಕ್ತಿ, ಕಳೆದ ಎಂಟು ವರ್ಷಗಳ ಹಿಂದೆ ಶಶಿರೇಖಾ ಎನ್ನುವ ಮಹಿಳೆಯನ್ನ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಮೂರು ವರ್ಷವಾದ್ರು ಮಕ್ಕಳಾಗದ ಹಿನ್ನೆಲೆಯಲ್ಲಿ ವೈದ್ಯನಿಗೆ ಗಂಡಸುತನವೇ ಇಲ್ಲ ಎಂದು ಪತ್ನಿ ತಾಯಿ ಆರೋಪಿಸಿದ್ದರಂತೆ. ಹೀಗಾಗಿ ಗಂಡಸುತನ ಸಾಬೀತು ಮಾಡಲು ಬೆಂಗಳೂರು ಮೂಲದ ಅಂಜಲಿ ಎನ್ನುವ ಯುವತಿಯೊಂದಿಗೆ ಮದುವೆಯಾಗಿದ್ದನಂತೆ. ಇದಕ್ಕೂ ಮುನ್ನ ಇನ್ನೊಬ್ಬ ಯುವತಿಯೊಂದಿಗೂ ಪ್ರೇಮ ವಿವಾಹವಾಗಿದ್ದ ಎಂದು ಆರೋಪಿಸಲಾಗುತ್ತಿದೆ. ಈ ಬಗ್ಗೆ ಮೊದಲ ಪತ್ನಿ ನಾಲ್ಕು ವರ್ಷಗಳ ಹಿಂದೆ ದೂರು ಸಹ ನೀಡಿದ್ದರಂತೆ, ಹೀಗಾಗಿ ಮೊದಲ ಪತ್ನಿಯನ್ನ ಮದುವೆಯಾದ ಎರಡೇ ವರ್ಷದಲ್ಲಿ ಪತ್ನಿಗೆ ಕಿರುಕುಳ ನೀಡಿ, ಇದೀಗ ಮೂರನೇ ಮದುವೆಗೆ ರೆಡಿಯಾದಾಗ ಮೊದಲ ಪತ್ನಿ ಶಶಿರೇಖಾ ವೈದ್ಯ ಪತಿ ಮೇಲೆ ರೌದ್ರಾವತಾರ ತೋರಿಸಿದ್ದಾಳೆ.