200 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವನ್ನು ರಾಜಮೌಳಿ ನಿರ್ದೇಶಿಸುತ್ತಿದ್ದಾರೆ.
ಭಾರತೀಯ ಚಿತ್ರರಂಗದ ಹೆಚ್ಚು ವೆಚ್ಚದಾಯಕ ಹಾಗೂ ಹೆಚ್ಚು ನಿರೀಕ್ಷಿತ ಚಲನಚಿತ್ರ ಬಾಹುಬಲಿ-2 ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ನಟಿಸುವ ಸಾಧ್ಯತೆಗಳಿವೆ ಎಂಬ ಸುದ್ದಿ ಹಬ್ಬಿದೆ. ಈ ಚಿತ್ರದಲ್ಲಿ ಅವರು ಸಣ್ಣ ಪಾತ್ರದಲ್ಲಿ ನಟಿಸಲಿದ್ದು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ ಎಂಬ ಊಹಾಪೋಹಗಳು ಹರಿದಾಡಿದ್ದವು.ಆದರೆ ಸಿನಿಮಾ ತಂಡ ಟ್ವೀಟ್ ಮಾಡಿ ಈ ಚಿತ್ರದಲ್ಲಿ ಅವರು ಅಭಿನಯಿಸುತ್ತಿಲ್ಲ ಎಂದು ತಿಳಿಸಿದೆ. 200 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಈ ಚಿತ್ರವನ್ನು ರಾಜಮೌಳಿ ನಿರ್ದೇಶಿಸುತ್ತಿದ್ದಾರೆ. ಪ್ರಭಾಸ್, ರಾಣ ದಗ್ಗುಬಟ್ಟಿ, ಅನುಷ್ಕ ಶೆಟ್ಟಿ, ತಮನ್ನಾ, ಸತ್ಯರಾಜ್ ಸುದೀಪ್ ಸೇರಿದಂತೆ ಹಲವು ನಟರು ಅಭಿಯಯಿಸಲಿದ್ದು, ಸಿನಿಮಾ ಏಪ್ರಿಲ್ 28ರಂದು ವಿಶ್ವದಾದ್ಯಂತ ತೆರೆಕಾಣುವ ಸಂಭವವಿದೆ.
