ಸೈನಿಕರ ನಿಧಿಗೆ ಕಿಸಾನ್ ಸಮ್ಮಾನ್ ಕಲ್ಯಾಣ ನಿಧಿ ಬಳಸಲು ಮನವಿ ಮಾಡಿದ ಬಾಗಲಕೋಟೆ ರೈತ
ತಮಗೆ ಬರಬೇಕಾದ ಕಿಸಾನ್ ಸಮ್ಮಾನ್ ನಿಧಿಯ ಹಣವನ್ನು ಸೈನಿಕರ ಕಲ್ಯಾಣಕ್ಕೆ ಬಳಸಿಕೊಳ್ಳುವಂತೆ ಬಾಗಲಕೋಟೆ ರೈತರೋರ್ವರು ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಬಾಗಲಕೋಟೆ : ತಮಗೆ ಬರಬೇಕಾದ ಕಿಸಾನ್ ಸಮ್ಮಾನ್ ನಿಧಿಯನ್ನು ಸೈನಿಕರ ಕಲ್ಯಾಣಕ್ಕೆ ಬಳಸುವಂತೆ ಪ್ರಧಾನಿ ನರೇಂದ್ರ ಮೋದಿಗೆ ರೈತರೋರ್ವರು ಪತ್ರ ಬರೆದು ದೇಶಪ್ರೇಮ ಮೆರೆದಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಮೆಟಗುಡ್ಡ ಗ್ರಾಮದ ರೈತ ವೆಂಕಣ್ಣ ಹುಣಸಿಕಟ್ಟಿ ಕಿಸಾನ್ ಸಮ್ಮಾನ್ ನಿಧಿಯಿಂದ ರೈತರಿಗೆ ಒದಗಿಸಲಿರುವ 6 ಸಾವಿರ ರೂ.ಹಣ ಸೈನಿಕರ ಕಲ್ಯಾಣ ನಿಧಿಗೆ ಬಳಸಿಕೊಳ್ಳಲು ಮನವಿ ಮಾಡಿದ್ದಾರೆ.
ಪೈಲಟ್ ಅಭಿನಂದನ್ ಜೊತೆ ವಾಘಾ ಬಾರ್ಡರ್ ನಲ್ಲಿ ಕಾಣಿಸಿಕೊಂಡ ಆ ಮಹಿಳೆ ಯಾರು?
ದೇಶದ ಗಡಿಭಾಗದಲ್ಲಿ ಸೈನಿಕರು ಗಡಿ ಕಾವಲು ಕಾಯುತ್ತಿದ್ದಾರೆ, ರೈತರು ಜನರಿಗೆ ಅನ್ನ ನೀಡುತ್ತಿದ್ದಾರೆ. ದೇಶದ ಸೈನಿಕರು ಹಗಲಿರಳು ಎನ್ನದೇ 24 ಗಂಟೆಗಳ ಕಾಲ ದೇಶದ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ತಾವು ಕಿಸಾನ್ ಸಮ್ಮಾನ್ ನಿಧಿಯಿಂದ ಒದಗಿಸಲಿರುವ 6 ಸಾವಿರ ಹಣವನ್ನ ಸೈನಿಕರ ಕಲ್ಯಾಣ ನಿಧಿಗೆ ಬಳಸಲು ಪತ್ರದ ಮೂಲಕ ತಿಳಿಸಿದರು.
ಈ ಎಲ್ಲಾ ವಿಚಾರವನ್ನು ಪತ್ರದಲ್ಲಿ ಬರೆದು ರೈತ ವೆಂಕಣ್ಣ ಪ್ರಧಾನಿ ಪೋಸ್ಟ್ ಮಾಡಿದ್ದಾರೆ.