ಮೃತ ವ್ಯಕ್ತಿಯನ್ನು ಬಸಪ್ಪ ಎಂದು ಗುರುತಿಸಲಾಗಿದೆ. ಬೆಂಕಿಯಿಂದ ಗಾಯಗೊಂಡಿರುವ ಪತ್ನಿ ನಿಮ೯ಲಾ, ಮಕ್ಕಳಾದ ಸವಿತಾ ಮತ್ತು ರಾಹುಲ್  ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬಾಗಲಕೋಟೆ(ಸೆ.07): ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಪತ್ನಿ, ಮಕ್ಕಳಿಗೆ ಸಮೇತ ಬೆಂಕಿ ಹಚ್ಚಿಕೊಂಡು ಸಾಮೂಹಿಕ ಆತ್ಮಹತ್ಯೆಗೆ ಮುಂದಾಗಿ ಕೊನೆಗೆ ತಾನಾಗಿ ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನೆಲವಗಿ ಗ್ರಾಮದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಬಸಪ್ಪ ಎಂದು ಗುರುತಿಸಲಾಗಿದೆ. ಬೆಂಕಿಯಿಂದ ಗಾಯಗೊಂಡಿರುವ ಪತ್ನಿ ನಿಮ೯ಲಾ, ಮಕ್ಕಳಾದ ಸವಿತಾ ಮತ್ತು ರಾಹುಲ್ ಬದುಕುಳಿದಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಾನಮತ್ತನಾಗಿದ್ದ ಬಸಪ್ಪ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಮನೆ ಮಂದಿ ಜೊತೆ ತಾನು ಸಮೂಹಿಕ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಹೆಂಡತಿ ಮತ್ತು ಮಕ್ಕಳು ಚೀರಾಡಿದಾಗ ಅಕ್ಕ ಪಕ್ಕದ ಮಕ್ಕಳು ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ. ಬಾದಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.