ನಮ್ಮ ಕಣ್ಣಿಗೆ ಕಾಣದಿದ್ದರೂ ಪ್ರತಿಯೊಬ್ಬ ಜೀವಂತ ವ್ಯಕ್ತಿಯ ಹೃದಯ ಬಡಿತವಾಗುತ್ತದೆ. ಆದರೆ ಮಧ್ಯಪ್ರದೇಶದಲ್ಲಿ ಜನಿಸಿದ ಮಗುವಿನ ಬಡಿಯುವ ಹೃದಯ ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತದೆ. ಸದ್ಯ ಈ ಮಗುವನ್ನು ಸರ್ಕಾರಿ ವೆಚ್ಚದ ಮೇಲೆ ಹೆಚ್ಚಿ ಚಿಕಿತ್ಸೆಗಾಗಿ ದೆಹಲಿಯ ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆಗೆ ಕೊಂಡೊಯ್ಯಲಾಗಿದೆ.
ಮಧ್ಯಪ್ರದೇಶ(ಎ.11): ನಮ್ಮ ಕಣ್ಣಿಗೆ ಕಾಣದಿದ್ದರೂ ಪ್ರತಿಯೊಬ್ಬ ಜೀವಂತ ವ್ಯಕ್ತಿಯ ಹೃದಯ ಬಡಿತವಾಗುತ್ತದೆ. ಆದರೆ ಮಧ್ಯಪ್ರದೇಶದಲ್ಲಿ ಜನಿಸಿದ ಮಗುವಿನ ಬಡಿಯುವ ಹೃದಯ ಸ್ಪಷ್ಟವಾಗಿ ಕಣ್ಣಿಗೆ ಕಾಣುತ್ತದೆ. ಸದ್ಯ ಈ ಮಗುವನ್ನು ಸರ್ಕಾರಿ ವೆಚ್ಚದ ಮೇಲೆ ಹೆಚ್ಚಿ ಚಿಕಿತ್ಸೆಗಾಗಿ ದೆಹಲಿಯ ಅಖಿಲ ಭಾರತೀಯ ಆಯುರ್ವಿಜ್ಞಾನ ಸಂಸ್ಥೆಗೆ ಕೊಂಡೊಯ್ಯಲಾಗಿದೆ.
ಮಧ್ಯಪ್ರದೇಶದ ಖಜುರಾಹೋ ನಿವಾಸಿ ಅರವಿಂದ್ ಪಟೇಲ್ ಹಾಗೂ ಪ್ರೇಮ ಕುಮಾರಿ ದಂಪತಿಗೆ ಈ ಮಗು ಜನಿಸಿದ್ದು, ಕಂದಮ್ಮನನ್ನು ನೋಡಿದವರೆಲ್ಲರೂ ಅಚ್ಚರಿಗೊಳಗಾಗಿದ್ದಾರೆ. ಮಗುವಿನ ಹೃದಯ ಎದೆಯ ಹೊರಭಾಗದಲ್ಲಿದ್ದು, ಹೃದಯ ಬಡಿತ ಸ್ಪಷ್ಟವಾಗಿ ಕಾಣುತ್ತಿತ್ತು ಎಂದು ತಿಳಿದು ಬಂದಿದೆ. ಹೀಗಾಗಿ ಮಗುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದು, ಮಗುವನ್ನು ಪರಿಶೀಲಿಸಿದ ವೈದ್ಯರು ಚಿಕಿತ್ಸೆಗಾಗಿ ದೆಹಲಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತಾಗಿ ಮಾತನಾಡಿದ ವೈದ್ಯರು 'ಲಕ್ಷದಲ್ಲಿ ಒಂದು ಮಗುವಿನ ಹೃದಯ ಹೀಗೆ ಎದೆಯ ಹೊರ ಭಾಗದಲ್ಲಿರುತ್ತದೆ.ಎಡಿಯೇಷನ್ ಪ್ರಭಾವ, ಸೂರ್ಯ ಗ್ರಹಣದ ವೇಳೆ ಬೀಳುವ ಕಿರಣಗಳ ಪ್ರಭಾವದಿಂದ ಹೀಗಾಗುತ್ತದೆ' ಎಂದಿದ್ದಾರೆ. ಸದ್ಯ ೀ ಅಪರೂಪದ ಮಗುವಿ ಹೃದಯ ಬಡಿತದ ವಡಿಯೋ ಸಾಮಾಜಿಕ ಜಾಲಾತಾಣಗಳಲ್ಲಿ ವೈರಲ್ ಆಗಿದೆ.
ಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ https://www.youtube.com/watch?v=4Xv2QUBboDg
