ರಾಜಕಾಲುವೆಗೆ ಪುಟ್ಟ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರ ಬಳಿಯ ವಿದ್ಯಾರಣ್ಯಪುರದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾರೆ ಕೆಲಸಕ್ಕೆಂದು ಕಲುಬುರಗಿಯಿಂದ ಬಂದಿದ್ದ ಕುಟುಂಬದ ಮೂರು ವರ್ಷದ ತಲುಶ್ರೀ ಎಂಬ ಮಗು ಸಾವನ್ನಪ್ಪಿದೆ.

ಬೆಂಗಳೂರು (ಜ.09): ರಾಜಕಾಲುವೆಗೆ ಪುಟ್ಟ ಮಗುವೊಂದು ಬಿದ್ದು ಮೃತಪಟ್ಟಿರುವ ಘಟನೆ ದೊಡ್ಡಬೊಮ್ಮಸಂದ್ರ ಬಳಿಯ ವಿದ್ಯಾರಣ್ಯಪುರದಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಾರೆ ಕೆಲಸಕ್ಕೆಂದು ಕಲುಬುರಗಿಯಿಂದ ಬಂದಿದ್ದ ಕುಟುಂಬದ ಮೂರು ವರ್ಷದ ತಲುಶ್ರೀ ಎಂಬ ಮಗು ಸಾವನ್ನಪ್ಪಿದೆ.

ಬೆಳಗ್ಗೆ 9 ಗಂಟೆ ಸುಮಾರಿಗೆ ಆಟವಾಡುತ್ತಿದ್ದ ಮಗು ಕಾಲುವೆಗೆ ಬಿದ್ದಿದೆ. ಮಗು ಬಿದ್ದು ಒಂದು ಗಂಟೆಯಾದರೂ ಕೂಡ ಯಾರೂ ಗಮನಿಸಿರಲಿಲ್ಲ. ನಂತರ ನೋಡುವಾಗ ಮಗು ಮೃತಪಟ್ಟಿದೆ.

ಸುಮಾರು 15 ಕುಟುಂಬಗಳು ಈ ಜಾಗದಲ್ಲಿ ಟೆಂಟ್ ಹಾಕಿಕೊಂಡು ವಾಸವಾಗಿವೆ. ಘಟನಾ ಸ್ಥಳಕ್ಕೆ ಯಲಹಂಕ ಜೋನಲ್ ಇಂಜಿನಿಯರ್ ಪರಮೇಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಜಾಗದಲ್ಲಿ ತಂತಿ ಗೋಡೆಯನ್ನು ಅಳವಡಿಸಲು ಸರ್ವೆ ಮಾಡುವಂತೆ ಬಿಬಿಎಂಪಿ ಅಧಿಕಾರಿಗಳು ಇಂಜಿಯರ್ ಪರಮೇಶ್ವರ್ ಅವರಿಗೆ ಸೂಚನೆ ನೀಡಿದ್ದಾರೆ.