Asianet Suvarna News Asianet Suvarna News

ಬಾಬ್ರಿ-ರಾಮ ಜನ್ಮಭೂಮಿ ಪ್ರಕರಣ: ಹಸ್ತಕ್ಷೇಪಗಳ ಅರ್ಜಿ ವಜಾ, ಮುಂದಿನ ವಿಚಾರಣೆ 23ಕ್ಕೆ

ಈ ಅರ್ಜಿಗಳ ವಾದಿಗಳು ವಿವಾದಿತ 2.77 ಎಕರೆ ಭೂಮಿಯನ್ನು ಧಾರ್ಮಿಕ ಬಳಕೆಗೆ ಬದಲಾಗಿ 'ಜಾತ್ಯತೀತ'ವಾಗಿ ಬಳಸಬೇಕೆಂದು ಪ್ರಶ್ನಿಸಿದ್ದರು.

Babri Masjid Ram Janmabhoomi case SC fixes March 23 as next date of hearing

ನವದೆಹಲಿ(ಮಾ.14): ಸುಪ್ರೀಂ ಕೋರ್ಟ್ ಬಾಬ್ರಿ ಮಸೀದಿ ಹಾಗೂ ರಾಮ ಜನ್ಮಭೂಮಿ ಪ್ರಕರಣಕ್ಕೆ ಸಂಬಂಧಿಸಿದಂತೆ 32 ಪ್ರತಿಷ್ಟಿತರ ಹಸ್ತಕ್ಷೇಪದ ಅರ್ಜಿಯನ್ನು ವಜಾಗೊಳಿಸಿ ಮುಂದಿನ ವಿಚಾರಣೆಯನ್ನು ಮಾ.23ಕ್ಕೆ ಕೈಗೆತ್ತಿಕೊಳ್ಳಲಿದೆ.

ಬಿಜೆಪಿ ನಾಯಕ ಸುಬ್ರಹ್ಮಣ್ಯ ಸ್ವಾಮಿ, ಶ್ಯಾಮ್ ಬೆನಗಲ್, ಅಪರ್ಣ ಸೇನ್, ಅನಿಲ್ ದಾರ್ಕರ್, ತೀಸ್ತಾ ಸೆಟ್ಲವಾಡ್ ಸೇರಿದಂತೆ 32 ಮಂದಿಯ ಅರ್ಜಿಗಳನ್ನು ವಜಾಗೊಳಿಸಿತು. ಈ ಅರ್ಜಿಗಳ ವಾದಿಗಳು ವಿವಾದಿತ 2.77 ಎಕರೆ ಭೂಮಿಯನ್ನು ಧಾರ್ಮಿಕ ಬಳಕೆಗೆ ಬದಲಾಗಿ 'ಜಾತ್ಯತೀತ'ವಾಗಿ ಬಳಸಬೇಕೆಂದು ಪ್ರಶ್ನಿಸಿದ್ದರು.

ಅಲಹಾಬಾದ್ ಹೈಕೋರ್ಟ್ 2010ರ ತೀರ್ಪಿನಲ್ಲಿ  ವಿವಾದಿತ 2.77 ಎಕರೆ ಭೂಮಿಯನ್ನು ರಾಮ್ ಲಲ್ಲಾ, ಸುನ್ನಿ ವಕ್ಫ್ ಮಂಡಳಿ ಹಾಗೂ ನಿರ್ಮೋಹಿ ಅಕಾರಾ ಸಂಸ್ಥೆಗಳಿಗೆ ಹಂಚಿತ್ತು. ವಿವಾದವನ್ನು ಹೊರಗಿನ ಹೊರಗಿನ ವ್ಯಕ್ತಿಗಳ ಬದಲು ವಿವಾದಿತ ವ್ಯಕ್ತಿಗಳೆ ಬಗೆಹರಿಸಿಕೊಳ್ಳುವುದು ಉತ್ತಮ ಎಂದು ತಿಳಿಸಿದೆ.

Follow Us:
Download App:
  • android
  • ios