ಇವರ ಸಾವಿನಿಂದಾಗಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಹಿಂದೂ ಹಾಗೂ ಮುಸ್ಲೀಂ ಎರಡೂ ಕಡೆಯ ಅರ್ಜಿದಾರರು ನಿಧನ ಹೊಂದಿದಂತಾಗಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ ಮುಸ್ಲಿಮರ ಪರ ಅತ್ಯಂತ ಹಿರಿಯ ಅರ್ಜಿದಾರರೆನಿಸಿದ್ದ 95 ವರ್ಷದ ಹಶೀಮ್ ಅನ್ಸಾರಿ ಕೊನೆಯುಸಿರೆಳೆದಿದ್ದರು.​

ನವದೆಹಲಿ (ಸೆ.16): ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದ ಮುಖ್ಯ ಅರ್ಜಿದಾರ ಮಹಂತ್ ಭಾಸ್ಕರ್ ದಾಸ್ (89) ಇಂದು ಶನಿವಾರ ನಿಧನ ಹೊಂದಿದ್ದಾರೆ.

ಭಾಸ್ಕರ್ ಪ್ರಸಾದ್ ಬಹಳ ಕಾಲದಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಬುಧವಾರ ರಾತ್ರಿ ಅವರು ಫೈಜಾಬಾದ್’ನಲ್ಲಿರುವ ಹರ್ಶನ್ ಹಾರ್ಟ್ ಇನ್ಸಿಟ್ಯೂಟ್’ಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಮಧ್ಯಾಹ್ಯ 3 ಗಂಟೆಗೆ ಇಹಲೋಕದ ಪಯಣ ಮುಗಿಸಿದ್ದಾರೆ.

ಸಾರ್ವಜನಿಕ ದರ್ಶನಕ್ಕಾಗಿ ಇವರ ದೇಹವನ್ನು ನಾಕಾ ಹನುಮಾನ್ ಗಾದಿಯಲ್ಲಿ ಇರಿಸಲಾಗಿದೆ. ಅಯೋಧ್ಯೆಯ ಸರಯೂ ನದಿ ದಂಡೆ ಮೇಲೆ ಅಂತಿಮ ವಿಧಿವಿಧಾನಗಳು ನಡೆಯಲಿವೆ.

ಇವರ ಸಾವಿನಿಂದಾಗಿ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಪ್ರಕರಣದಲ್ಲಿ ಹಿಂದೂ ಹಾಗೂ ಮುಸ್ಲೀಂ ಎರಡೂ ಕಡೆಯ ಅರ್ಜಿದಾರರು ನಿಧನ ಹೊಂದಿದಂತಾಗಿದೆ. ಕಳೆದ ವರ್ಷದ ಜುಲೈ ತಿಂಗಳಲ್ಲಿ ಮುಸ್ಲಿಮರ ಪರ ಅತ್ಯಂತ ಹಿರಿಯ ಅರ್ಜಿದಾರರೆನಿಸಿದ್ದ 95 ವರ್ಷದ ಹಶೀಮ್ ಅನ್ಸಾರಿ ಕೊನೆಯುಸಿರೆಳೆದಿದ್ದರು.

ಇನ್ನು, ಮಹಂತ್ ಭಾಸ್ಕರ್ ದಾಸ್ ಅವರು ನಿರ್ಮೋಹಿ ಅಖಾಡದ ಮುಖ್ಯ ಅರ್ಚಕರಾಗಿದ್ದರು. 1959ರಲ್ಲಿ ರಾಮಜನ್ಮಭೂಮಿಯು ತಮಗೆ ಸೇರಿದ್ದೆಂದು ಹಿಂದೂಗಳ ಪರವಾಗಿ ಅರ್ಜಿ ಹಾಕಿದ್ದರು.