ಮೃತ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಬಿಸಾಕಿ ಹೋದ ಹೆತ್ತವರು..!

First Published 14, Mar 2018, 9:24 AM IST
Babay Death In Davanagere News
Highlights

ಮೃತ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಹೆತ್ತವರೇ ಬಿಸಾಕಿ ಹೋದ ಅಮಾನವೀಯ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.   2 ವರ್ಷದ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಮಗುವನ್ನೆ ಆಸ್ಪತ್ರೆ ಆವರಣದಲ್ಲೇ ಬಿಸಾಕಿ ಹೋಗಿದ್ದಾರೆ.

ದಾವಣಗೆರೆ : ಮೃತ ಮಗುವನ್ನು ಬಟ್ಟೆಯಲ್ಲಿ ಸುತ್ತಿ ಹೆತ್ತವರೇ ಬಿಸಾಕಿ ಹೋದ ಅಮಾನವೀಯ ಘಟನೆ ದಾವಣೆಗೆರೆಯಲ್ಲಿ ನಡೆದಿದೆ.   2 ವರ್ಷದ ಮಗು ಮೃತಪಟ್ಟ ಹಿನ್ನೆಲೆಯಲ್ಲಿ ಮಗುವನ್ನೆ ಆಸ್ಪತ್ರೆ ಆವರಣದಲ್ಲೇ ಬಿಸಾಕಿ ಹೋಗಿದ್ದಾರೆ.

ದಾವಣಗೆರೆಯಲ್ಲಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಮಗುವಿನ ಶವವನ್ನು ಕಂಡ ಆಸ್ಪತ್ರೆ ಸಿಬ್ಬಂದಿ ಮೃತ ಮಗುವಿನ ಶವವನ್ನು ಶವಾಗಾರಕ್ಕೆ ಸಾಗಿಸಿದ್ದಾರೆ.

ಅಲ್ಲದೇ ಬಟ್ಟೆಯಲ್ಲಿ ಮಗುವನ್ನು ಸುತ್ತಿ ಬಿಸಾಡಿದ್ದು, ಪೋಷಕರ ವಿಳಾಸ ಹಾಗೂ ವಿವರಕ್ಕಾಗಿ ಆಸ್ಪತ್ರೆ ಸಿಬ್ಬಂದಿ ತಲಾಷ್ ನಡೆಸುತ್ತಿದ್ದಾರೆ.  ಪೋಷಕರ  ಈ ಕೃತ್ಯಕ್ಕೆ ಇಲ್ಲಿ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

loader