ಪ್ರಧಾನಿ ನರೇಂದ್ರ ಮೋದಿ ಆಪ್ತರಾಗಿರುವ  ಯೋಗಿ ಬಾಬಾ ರಾಮದೇವ್ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವು 3ರಿಂದ 5 ಲಕ್ಷ ಕೋಟಿ ರೂಪಾಯಿಯ ಹಗರಣವಾಗಿದೆಯೆಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಪ್ತರಾಗಿರುವ ಯೋಗಿ ಬಾಬಾ ರಾಮದೇವ್ ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮವು 3ರಿಂದ 5 ಲಕ್ಷ ಕೋಟಿ ರೂಪಾಯಿಯ ಹಗರಣವಾಗಿದೆಯೆಂದು ಹೇಳಿದ್ದಾರೆ. ಭ್ರಷ್ಟ ಬ್ಯಾಂಕು ಅಧಿಕಾರಿಗಳು ನೋಟು ನಿಷೇಧ ಕ್ರಮದಿಂದಾಗಿ 3 ರಿಂದ 5 ಲಕ್ಷ ಕೋಟಿಯಷ್ಟು ಹಗರಣ ನಡೆಸಿದ್ದಾರೆ ಎಂದು ಅವರು ಹೇಳಿದ್ದಾರೆ. ಇದರಲ್ಲಿ ರಿಸರ್ವ್ ಬ್ಯಾಂಕು ಅಧಿಕಾರಿಗಳು ಶಾಮಿಲಾಗಿರುವ ಸಾಧ್ಯತೆಗಳಿವೆ ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.

ದಿ ಕ್ವಿಂಟ್’ಗೆ ನೀಡಿರುವ ಸಂದರ್ಶನದಲ್ಲಿ ರಾಮದೇವ್ ನೋಟು ನಿಷೇಧ ಕ್ರಮವನ್ನು ಜಾರಿಗೊಳಿಸಿರುವ ರೀತಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.