ಕೋರ್ಟ್​ ಶಿಕ್ಷೆ ಪ್ರಕಟಕ್ಕೂ ಮುನ್ನವೇ ಬಾಬಾ ಹಾಗೂ ಆತನ ವಕೀಲ ಕೋರ್ಟ್​ನಲ್ಲಿ ಹಲವು ಹೈಡ್ರಾಮ ಶುರು ಮಾಡಿದರು.

ಚಂಡೀಘಡ(ಆ.28): ಅತ್ಯಾಚಾರಿ ಬಾಬಾ ರಾಮ್​ ರಹೀಂಗೆ 20 ವರ್ಷ ಜೈಲು ಶಿಕ್ಷೆ ಪಕ್ಕಾ ಆಗಿದೆ. ಕೈದಿಯಾಗಿ ಜೈಲಿನಲ್ಲಿ ಕಾಲಿಟ್ಟ ಬಾಬಾ. ಜೈಲಿನಲ್ಲಿ ಹೊಸ ಹೊಸ ಹೈಡ್ರಾಮ ಶುರು ಮಾಡಿದ. ಜೈಲು ಹಕ್ಕಿಯಾಗಿದ್ದ ಬಾಬಾ ಜೈಲಿನ ವ್ಯವಸ್ಥೆ ಬಗ್ಗೆ ನಾನಾ ಆರೋಪ ಮಾಡಿದ.

ಅತ್ಯಾಚಾರಿ ಬಾಬಾ, ಡೇರಾ ಸಚ್ಚಾ ಸೌದ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮೀತ್‌ ರಾಮ್ ರಹೀಂ ಸಿಂಗ್‌ಗೆ ಸಿಬಿಐ ವಿಶೇಷ ಕೋರ್ಟ್ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಕೋರ್ಟ್​ ಶಿಕ್ಷೆ ಪ್ರಕಟಕ್ಕೂ ಮುನ್ನವೇ ಬಾಬಾ ಹಾಗೂ ಆತನ ವಕೀಲ ಕೋರ್ಟ್​ನಲ್ಲಿ ಹಲವು ಹೈಡ್ರಾಮ ಶುರು ಮಾಡಿದರು.

ಕೋರ್ಟ್​ 10 ವರ್ಷ ಜೈಲು ಶಿಕ್ಷೆ ಪ್ರಕಟಿಸಿದ ಕೂಡಲ್ಲೇ ರೇಪಿಸ್ಟ್​​ ಬಾಬಾ ಕೋರ್ಟ್​ ಹಾಲಿನಿಂದ ಹೊರ ಬರಲು ಹಿಂದೇಟು ಹಾಕಿದ. ನಾನು ನಿರಾಪರಾಧಿ ನನಗೆ ಅನ್ಯಾಯವಾಗ್ತಿದೆ. ನಾನು ಅಮಾಯಕ ಎಂದು ಬಾಬಾ ನ್ಯಾಯಧೀಶರ ಮುಂದೆ ಅಂಗಲಾಚಿ ಬೇಡಿದ ಬಾಬಾ, ಕೋರ್ಟ್​ನಲ್ಲೇ ಕಣ್ಣೀರಿಟ್ಟ. ಆದರೂ ನ್ಯಾಯಾಧೀಶರು ಎಲ್ಲಾ ಕೈದಿಗಳಂತೆ ಶಿಕ್ಷೆ ಪ್ರಕಟಿಸಿ ಬಾಬಾಗೆ ಕೈದಿ ನಂಬರ್​​ 1997 ನೀಡಿ ಜೈಲಿಗೆ ಹೋಗಿ ಎಂದರು. ಆದರೆ ಬಾಬಾ ನಾನು ಇಲ್ಲೇ ಇರುತ್ತೇನೆ ಎಂದು ಹೊರ ಹೋಗದೆ ಕೂತಿದ್ದ. ಕೊನೆಗೂ ಪೊಲೀಸರೇ ಬಾಬಾನನ್ನು ಎಳೆದೊಯ್ದರು.

ಜೈಲಿನಲ್ಲಿ ಚಹಾ ಬೇಕು ಅಂತ ಪಟ್ಟು ಹಿಡಿದ ಬಾಬಾ!

ಕೈದಿಯಾಗಿ ಜೈಲು ಸೇರಿದ ರಾಮ್​ ರಹೀಂ ಬಾಬಾ ಜೈಲಿಗೆ ಹೋದ ಕೂಡಲ್ಲೇ ನನಗೆ ಚಹಾ ಬೇಕು ಅಂತ ಪಟ್ಟು ಹಿಡಿದ. ಜೈಲು ವೇಳಾಪಟ್ಟಿಯಲ್ಲಿ ಚಹಾ ನೀಡುವ ವ್ಯವಸ್ಥೆ ಇಲ್ಲದ ಕಾರಣ ಜೈಲು ಸಿಬ್ಬಂದಿ ಬಾಬಾನ ಪಟ್ಟು ತಿರಸ್ಕರಿಸಿದರು. ಅಷ್ಟಕ್ಕೆ ಸುಮ್ಮನೆ ಕುಳಿತುಕೊಳ್ಳದ ರೇಪಿಸ್ಟ್​​ ಬಾಬಾ ಮತ್ತೊಂದು ನಾಟಕ ಶುರು ಮಾಡಿದ ಜೈಲಿನಲ್ಲಿ ನೀಡುವ ಊಟ ರುಚಿ ಇರುವುದು ಇಲ್ಲ. ಬೇರೆ ಊಟದ ವ್ಯವಸ್ಥೆ ಮಾಡಬೇಕು ಅಂತ ಹೊಸ ವರಸೆ ತೆಗೆದ, ಆದರೆ ಜೈಲು ಸಿಬ್ಬಂದಿ ಬಾಬಾನ ಎಲ್ಲಾ ಬೇಡಿಕೆಗಳನ್ನು ತಿರಸ್ಕರಿಸಿದರು.

ಜೈಲು ಬದಲಾಯಿಸುವಂತೆ ಬಾಬಾ ವಕೀಲ ಮನವಿ!

ಹರಿಯಾಣದ ರೋಹ್ಟಕ್ ಜೈಲಿನಲ್ಲಿ ಯಾವುದೇ ಸರಿಯಾದ ವ್ಯವಸ್ಥೆಯಿಲ್ಲ. ಹೀಗಾಗಿ ಬಾಬಾನನ್ನು ಬೇರೆ ಜೈಲಿಗೆ ಶಿಫ್ಟ್​​ ಮಾಡುವಂತೆ ಬಾಬಾನ ವಕೀಲರು ನ್ಯಾಯಾಧೀಶರ ಮುಂದೆ ಮನವಿ ಮಾಡಿದ್ದ. ಆದರೆ ನ್ಯಾಯಾಧೀಶರು ಬಾಬಾ ವಕೀಲರು ಮಾಡಿದ ಮನವಿಯನ್ನು ಸರಸಗಟವಾಗಿ ತಿರಸ್ಕರಿಸಿದರು.

ಒಟ್ಟಿನಲ್ಲಿ ಐಶಾರಾಮಿ ಜೀವನ ನಡೆಸಿದ ರಾಮ್ ರಹೀಮ್ ಸಿಂಗ್‌ ತಾನು ಮಾಡಿದ ತಪ್ಪಿಗೆ ಜೈಲು ಪಾಲಾಗಿದ್ದಾನೆ. ಜೈಲು ಸೇರಿ 24 ಗಂಟೆಯೂ ಆಗಿಲ್ಲ. ಆಗಲೇ ಜೈಲಿನಲ್ಲಿ ತನ್ನ ಪ್ರವಚನದ ನಾಟಕ ಶುರು ಮಾಡಿ, ಜೈಲಿನ ವ್ಯವಸ್ಥೆ ಬಗ್ಗೆ ನಾನಾ ಆರೋಪ ಮಾಡಲು ಶುರು ಮಾಡಿದ್ದಾನೆ. ಆದರೆ ಬಾಬಾಗೆ ಇನ್ನು 20 ವರ್ಷಗಳ ಕಾಲ ಜೈಲಿನ ರೋಟಿ ಮತ್ತು ತಿಳಿಬೇಳೆ ಸಾರೇ ಗತಿ.

-ಜೆ. ಎಸ್​. ಪೂಜಾರ್​, ನ್ಯೂಸ್​ ಡ್ಕೆಸ್​, ಸುವರ್ಣನ್ಯೂಸ್​