ಯಾವನ್ರೀ ಆ ಸುರೇಶ್? ಬಿಎಸ್‌ವೈ ಗುಡುಗು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 11, Sep 2018, 1:35 PM IST
B S Yadiyurappa slams D. K. Suresh
Highlights

ಡಿ ಕೆ ಸುರೇಶ್ ಆರೋಪಕ್ಕೆ ಬಿಎಸ್‌ವೈ ಪ್ರತ್ಯುತ್ತರ | ಆದಾಯ ತೆರಿಗೆ ಇಲಾಖೆಗೆ ನಾನು ಯಾವುದೇ ಪತ್ರ ಬರೆದಿಲ್ಲ ಎಂದು ಸ್ಪಷ್ಟನೆ | ಡಿ.ಕೆ.ಸುರೇಶ್ ಸೃಷ್ಟಿ ಮಾಡಿರುವ ನಕಲಿ ಪತ್ರ ಎಂದು ತಿರುಗೇಟು 

ಬೆಂಗಳೂರು (ಸೆ. 11): ಆದಾಯ ತೆರಿಗೆ ಇಲಾಖೆಗೆ ನಾನು ಯಾವುದೇ ಪತ್ರ ಬರೆದಿಲ್ಲ. ಸಂಸದ ಡಿ.ಕೆ.ಸುರೇಶ್ ಸೃಷ್ಟಿ ಮಾಡಿರುವ ನಕಲಿ ಪತ್ರ ಅದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಇಲಾಖೆಗೆ ಪತ್ರ ಬರೆದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯಾವನು ಆ ಸುರೇಶ್? ನಾನು ಯಾಕೆ ಆತನಿಗೆ ಉತ್ತರ ಕೊಡಬೇಕು? ಪತ್ರ ವಿಚಾರವೆಲ್ಲಾ ಆತನೇ ಸೃಷ್ಟಿಸಿದ್ದಾನೆ. ದುರುದ್ದೇಶದಿಂದ ಕೂಡಿರುವ ಹೇಳಿಕೆ ಅದಾಗಿದೆ ಎಂದು ಕಿಡಿಕಾರಿದರು.

2017 ರ ಜನವರಿಯಲ್ಲಿ ಬರೆದ ಪತ್ರ ಆಗಿದ್ದರೆ ಇಷ್ಟು ದಿನ ಏನು ಮಾಡುತ್ತಿದ್ದರು. ಅವರ ಹೇಳಿಕೆಗೆ ಉತ್ತರ ನೀಡಬೇಕಾದ ಅಗತ್ಯ ಇಲ್ಲ. ಅದೊಂದು ನಕಲಿ ಪತ್ರವಾಗಿದೆ. ಈ ಹಿಂದೆಯೂ ಒಮ್ಮೆ ನಕಲಿ ಮಾಡಿ ಬಿಡುಗಡೆ ಮಾಡಿದ್ದರು. ಅದು ಸುರೇಶ್ ಚಾಳಿ. ಕೇವಲ ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸುರೇಶ್ ಆರೋಪಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.

loader