ಇತ್ತೀಚೆಗೆ ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಮಾಜವಾದಿ ಮುಖಂಡ ಆಝಂ ಖಾನ್ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತು ಮುಖಂಡ ಅನಿಲ್ ಪಾಂಡೆ ದೂರಿನ ಮೇರೆಗೆ ಅಝಂ ಖಾನ್ ವಿರುದ್ಧ ಭಾರತೀಯ ದಂಡ ಕಾಯ್ದೆಯ ಸೆಕ್ಷನ್ 124A  ಪ್ರಕಾರ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ

ಮೀರಠ್ (ಜು.01): ಇತ್ತೀಚೆಗೆ ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಸಮಾಜವಾದಿ ಮುಖಂಡ ಆಝಂ ಖಾನ್ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ.

ಭಜರಂಗ ದಳ ಹಾಗೂ ವಿಶ್ವ ಹಿಂದೂ ಪರಿಷತ್ತು ಮುಖಂಡ ಅನಿಲ್ ಪಾಂಡೆ ದೂರಿನ ಮೇರೆಗೆ ಅಝಂ ಖಾನ್ ವಿರುದ್ಧ ಭಾರತೀಯ ದಂಡ ಕಾಯ್ದೆಯ ಸೆಕ್ಷನ್ 124A ಪ್ರಕಾರ ದೇಶದ್ರೋಹ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಬಜ್ನೋರ್’ನ ಚಂದಾಪುರ ಠಾಣಾಧಿಕಾರಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

ಯೋಧರು ನಡೆಸುತ್ತಿರುವ ದೌರ್ಜನ್ಯಕ್ಕೆ ಪ್ರತಿಯಾಗಿ ಕೆಲವು ಸ್ಥಳಗಳಲ್ಲಿ ಮಹಿಳೆಯರು ಯೊಧರ ಗುಪ್ತಾಂಗಗಳನ್ನು ಕತ್ತರಿಸುತ್ತಿದ್ದಾರೆ ಎಂದು ಅಝಂ ಖಾನ್ ಹೇಳಿದ್ದರು.

ಇನ್ನೊಂದೆಡೆ, ಅಝಂ ಖಾನ್ ನಾಲಿಗೆಯನ್ನು ಕತ್ತರಿಸಿ ತಂದವರಿಗೆ ರೂ.50 ಲಕ್ಷ ನೀಡುವುದಾಗಿ ಶಹಜಹಾನ್’ಪುರದ ವಿಎಚ್’ಪಿ ನಾಯಕ ರಾಜೆಶ್ ಕುಮಾರ್ ಅವಸ್ಥಿ ಘೋಷಿಸಿದ್ದಾರೆ.