ಇಲ್ಲಿದೆ ನೋಡಿ ನಿಮಗಾಗಿ ಕೆಲವು ಗಿಡಮೂಲಿಕೆಗಳು ಮತ್ತು ಅದರಿಂದಾಗುವ ಉಪಯೋಗಗಳು

ಇತ್ತೀಚಿನ ದಿನಗಳಲ್ಲಿ ಕಾಯಿಲೆ ಬಂದರೆ ಆಸ್ಪತ್ರೆಗಳಿಗೆ ಹೋಗುತ್ತೇವೆ. ಅಲ್ಲಿ ನೀಡುವ ಔಷಧಿಗಳನ್ನು ಸೇವಿಸುವ ಪ್ರಯತ್ನದಲ್ಲಿ ನಮ್ಮಲ್ಲಿ ಇರುವ ಅದೆಷ್ಟೋ ಆಯುರ್ವೇದಿಕ್ ಗಿಡಮೂಲಿಕೆಗಳನ್ನು ಮರೆತೇಬಿಟ್ಟಿರುತ್ತೇವೆ. ಇಲ್ಲಿದೆ ನೋಡಿ ನಿಮಗಾಗಿ ಕೆಲವು ಗಿಡಮೂಲಿಕೆಗಳು ಮತ್ತು ಅದರಿಂದಾಗುವ ಉಪಯೋಗಗಳು.

ಬಾದಾಮಿ ಜಾತಿಯ ಸಸ್ಯ

ಬಾದಾಮಿ ಯಂತಹ ಸಸ್ಯಗಳು ಕರುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ, ಮತ್ತು ಕೆಮ್ಮು, ಉಬ್ಬಸ ಅಥವಾ ಅಸ್ತಮಾ ರೋಗಗಳಿಗೆ ರಾಮಬಾಣವಾಗಿದೆ. ಹಾಗೂ ಅತಿಯಾದ ರಕ್ತಸ್ರಾವವನ್ನು ತಡೆಯುತ್ತದೆ. ಚರ್ಮದ ಅಲರ್ಜಿಯನ್ನು ತಡೆಯುತ್ತದೆ. ಮಕ್ಕಳಲ್ಲಿ ಉಂಟಾಗುವ ಅತಿಸಾರವನ್ನು ದೂರಮಾಡುತ್ತದೆ. ಹಾಗೂ ಮಕ್ಕಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದನ್ನು ತಪ್ಪಿಸುತ್ತದೆ. ಮೆಧುಮೇಹ, ರಕ್ತದೊತ್ತಡವನ್ನು ನಿವಾರಿಸುತ್ತದೆ.

ಕಾಡುಸೇವಂತಿಗೆ

ಇದರಲ್ಲಿ ವಿಟಮಿನ್ ಎ, ಸಿ, ಪೊಟ್ಯಾಸಿಯಂ, ಕ್ಯಾಲ್ಸಿಯಂ, ಕಬ್ಬಿಣದ ಅಂಶಗಳು ಹೇರಳವಾಗಿರುತ್ತವೆ. ಮೂತ್ರದ ಸಮಸ್ಯೆಯನ್ನು ಇದು ನಿವಾರಿಸುತ್ತದೆ. ಮಲಬದ್ಧತೆ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ತೀವ್ರತರವಾದ ಕೀಲು ನೋವುಗಳನ್ನು ಉಪಶಮನ ಮಾಡುತ್ತದೆ. ಜೀರ್ಣಕ್ರಿಯೆಯನ್ನು ಸರಾಗಗೊಳಿಸಿ ಹಸಿವು ಉಂಟಾಗಲು ಸಹಾಯಕವಾಗುತ್ತದೆ.

ಜೊಂಡು ಹುಲ್ಲು

ಇದು ಗಾಯವನ್ನು ಒಣಗುವಂತೆ ಮಾಡುತ್ತದೆ. ಚರ್ಮದ ಸೋಂಕಿಗೆ ಒಂದು ಉತ್ತಮ ಮುಲಾಮಾಗಿ ಕೆಲಸ ಮಾಡುತ್ತದೆ.ನೆಗಡಿಯನ್ನು ನಿವಾರಿಸುತ್ತದೆ.