ಅಯೋಧ್ಯೆಯಲ್ಲಿಂದು ಮರ್ಯಾದ ಪುರುಷೋತ್ತಮನ ದರ್ಶನಕ್ಕೆ ತೆರಳಿದ್ದ ಯಾತ್ರಾರ್ಥಿಗಳ ನಡುವೆ ನೂಕು ನುಗ್ಗಲು ಉಂಟಾಗಿದೆ. ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ನವದೆಹಲಿ (ಏ.05): ಅಯೋಧ್ಯೆಯಲ್ಲಿಂದು ಮರ್ಯಾದ ಪುರುಷೋತ್ತಮನ ದರ್ಶನಕ್ಕೆ ತೆರಳಿದ್ದ ಯಾತ್ರಾರ್ಥಿಗಳ ನಡುವೆ ನೂಕು ನುಗ್ಗಲು ಉಂಟಾಗಿದೆ. ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ. ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.
ನದಿಯಲ್ಲಿ ಸ್ನಾನ ಮುಗಿಸಿ ಶ್ರೀರಾಮನ ದರ್ಶನಕ್ಕೆ ತೆರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಕೂಡಲೇ ಪರಿಸ್ಥಿತಿ ಅರಿತ ಪೊಲೀಸರು ಬ್ಯಾರಿಕೇಡ್ಗಳನ್ನ ತೆಗೆದು ಯಾತ್ರಾರ್ಥಿಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.. ಸುಮಾರು 20 ಲಕ್ಷ ಯಾತ್ರಾರ್ಥಿಗಳು ದರ್ಶನಕ್ಕೆ ಏಕಕಾಲಕ್ಕೆ ತೆರಳಿದ್ದರಿಂದ ಭಾರೀ ನೂಕು ನುಗ್ಗಲು ಉಂಟಾಗಿದೆ.
