ಲಖ್ನೌ[ಮೇ.21]  ಅಯೋಧ್ಯೆ ಎಂಬ ಹೆಸರು ಕೇಳಿದ ತಕ್ಷಣ ರಾಮಜನ್ಮ ಭೂಮಿ ವಿವಾದ, ಸುಪ್ರೀಂ ಕೋರ್ಟ್ ಇಂಥದ್ದೆ ನಮ್ಮ ನೆನಪಿಗೆ ಬರುವಂತಹ ಸ್ಥಿತಿ ನಿರ್ಮಾಣವಾಗಿಹೋಗಿದೆ. ಆದರೆ ಇದೆಲ್ಲವನ್ನು ಮೀರಿ ಈ ದೇಶದಲ್ಲಿ ಸೌಹಾರ್ದತೆ ಹಾಗೆ ಉಳಿದುಕೊಂಡಿದೆ.

ಎಂದರೆ ಸದಾ ಧಾರ್ಮಿಕ ವೈಷಮ್ಯವೇ ನೆನಪಾಗಬಹುದು. ಆದರೆ ಅಲ್ಲಿಯ ಜನರ ಕೋಮು ಸೌಹಾರ್ದತೆ ಆಗಾಗ ಸುದ್ದಿಯಾಗುತ್ತಲೇ ಇರುತ್ತದೆ. ಮತ್ತೀಗ ರಂಜಾನ್ ಮಾಸ ನಡೆಯುತ್ತಿದ್ದು, ಅಯೋಧ್ಯೆಯ ಜನರು ಸೌಹಾರ್ದತೆಗೆ ಹೊಸ ಭಾಷ್ಯ ಕಲ್ಪಿಸಿದ್ದಾರೆ. 

ರಸೆಲ್ ಮಾರ್ಕೆಟ್‌ಗೆ ರಂಜಾನ್ ಶಾಪಿಂಗ್‌ಗೆ ಬರೋರಿಗೆ ಕಾದಿದೆ ಶಾಕ್!

ರಂಜಾನ್ ಮಾಸದ ಪ್ರಯುಕ್ತ ಅಯೋಧ್ಯೆಯ ಸೀತಾರಾಮ ಮಂದಿರದಲ್ಲಿ ಇಫ್ತಾರ್ ಲಕೂಟ್ ಆಯೋಜನೆ ಮಾಡಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕ ಯುಗಲ್ ಕಿಶೋರ್ ಮಾತನಾಡಿ, ನಾವು ಮೂರನೇ ಸಾರಿ ಇಫ್ತಾರ್ ಕೂಟ್ ಆಯೋಜನೆ ಮಾಡಿದ್ದೇವೆ.  ಪಕ್ಕದ ಮಸೀದಿಯಲ್ಲಿಯೂ ನವರಾತ್ರಿ ಆಚರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.ನಾವೆಲ್ಲರೂ ಒಂದೇ ತಾಯಿ ಮಕ್ಕಳಂತೆ ಬದುಕುತ್ತಿದ್ದೇವೆ. ಪರಷ್ಪರರ ಹಬ್ಬಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತೇವೆ. ದೇಶದಲ್ಲಿ ಕೋಮುದ್ವೇಷ ಬೆಳೆಸುತ್ತಿರುವ ಜನರ ಮಧ್ಯೆ ಸೀತಾರಾಮ ದೇಗುಲದ ಪೂಜಾರಿ ಪ್ರತ್ಯೇಕವಾಗಿ ನಿಲ್ಲುತ್ತಾರೆ ಎಂದು ಕೂಟದಲ್ಲಿ ಪಾಲ್ಗೊಂಡಿದ್ದ ಹಿರಿಯರೊಬ್ಬರು ತಮ್ಮ ಅಭಿಪ್ರಾಯ ಹೇಳಿದರು.