Asianet Suvarna News Asianet Suvarna News

ರಾಮಮಂದಿರ ನಿರ್ಮಾಣಕ್ಕೆ ಮುಹೂರ್ತ ಸನ್ನಿಹಿತ; ಮಧ್ಯಸ್ಥಿಕೆಗೆ ಮುಂದಾಗಿದ್ದಾರೆ ರವಿಶಂಕರ್ ಗುರೂಜಿ

 ಅಯೋದ್ಯೆಯಲ್ಲಿ ಬಾಬರಿ ಮಸೀದಿ-ರಾಮಮಂದಿರ ಸಮಸ್ಯೆ ಪರಿಹಾರ ಸನ್ನಿಹಿತವಾಗುತ್ತಿದೆಯಾ..? ಈಗ ನಡೆಯುತ್ತಿರುವ ಬೆಳವಣಿಗೆಗಳು ಆ ನಿರೀಕ್ಷೆಯನ್ನು ಹುಟ್ಟುಹಾಕಿವೆ.  ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗಲೇ ರಾಮಮಂದಿರ ನಿರ್ಮಾಣದ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು.  ಉತ್ತರ  ಪ್ರದೇಶದಲ್ಲಿ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದಂತೆ ಈ ನಿರೀಕ್ಷೆ ಇನ್ನೂ ಹೆಚ್ಚಾಗಿತ್ತು. ಈಗ ಅಖಾಡಕ್ಕಿಳಿದಿರುವ ರವಿಶಂಕರ್ ಗುರೂಜಿ ನಾಡಿದ್ದು ಅಯೋಧ್ಯೆಗೆ ಹೋಗುತ್ತಿದ್ದಾರೆ. ಅಂತೂ ಇಂತೂ ಹಲವು ವರ್ಷಗಳ ಸಮಸ್ಯೆ ಪರಿಹರಿಸಲು ವೇದಿಕೆ ಸಿದ್ದವಾಗಿದೆ.

Ayodhya row Involved as mediator in Ram Temple dispute of my own will says Sri Sri Ravi Shankar

ಬೆಂಗಳೂರು (ನ.13):  ಅಯೋದ್ಯೆಯಲ್ಲಿ ಬಾಬರಿ ಮಸೀದಿ-ರಾಮಮಂದಿರ ಸಮಸ್ಯೆ ಪರಿಹಾರ ಸನ್ನಿಹಿತವಾಗುತ್ತಿದೆಯಾ..? ಈಗ ನಡೆಯುತ್ತಿರುವ ಬೆಳವಣಿಗೆಗಳು ಆ ನಿರೀಕ್ಷೆಯನ್ನು ಹುಟ್ಟುಹಾಕಿವೆ.  ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೇರಿದಾಗಲೇ ರಾಮಮಂದಿರ ನಿರ್ಮಾಣದ ಬಗ್ಗೆ ನಿರೀಕ್ಷೆಗಳು ಗರಿಗೆದರಿದ್ದವು. ಉತ್ತರ ಪ್ರದೇಶದಲ್ಲಿ ಕಟ್ಟರ್ ಹಿಂದುತ್ವವಾದಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಹುದ್ದೆಗೇರುತ್ತಿದ್ದಂತೆ ಈ ನಿರೀಕ್ಷೆ ಇನ್ನೂ ಹೆಚ್ಚಾಗಿತ್ತು. ಈಗ ಅಖಾಡಕ್ಕಿಳಿದಿರುವ ರವಿಶಂಕರ್ ಗುರೂಜಿ ನಾಡಿದ್ದು ಅಯೋಧ್ಯೆಗೆ ಹೋಗುತ್ತಿದ್ದಾರೆ. ಅಂತೂ ಇಂತೂ ಹಲವು ವರ್ಷಗಳ ಸಮಸ್ಯೆ ಪರಿಹರಿಸಲು ವೇದಿಕೆ ಸಿದ್ದವಾಗಿದೆ.

ರಾಮಜನ್ಮಭೂಮಿ ವಿವಾದ ಬಗೆಹರಿಸಲು ವೇದಿಕೆ ಸಿದ್ದ..!

 ಹಲವು ವರ್ಷಗಳಿಂದ ಜೀವಂತವಾಗಿಯೇ ಇರುವ ರಾಮ ಜನ್ಮಭೂಮಿ ವಿವಾದವನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ರವಿಶಂಕರ್ ಗುರೂಜಿ ಮಧ್ಯಸ್ಥಿಕೆ ವಹಿಸಲಿದ್ದಾರೆ. ಈಗಾಗಲೇ ಶ್ರೀಗಳು ಮುಸ್ಲಿಂ ಧರ್ಮ ಗುರುಗಳು ಮತ್ತು ಹಿಂದೂ ಧರ್ಮ ಗುರುಗಳು, ಸ್ವಾಮೀಜಿಗಳ ಜೊತೆ ಚರ್ಚೆ ನಡೆಸಿದ್ದಾರೆ. ಈಗಾಗಲೇ ಹಲವು ಸುತ್ತಿನ ಮಾತುಕತೆಗಳು ನಡೆದಿದ್ದು ಅದರ ಮುಂದುವರಿದ ಭಾಗವಾಗಿ ನಾಡಿದ್ದು ಅಯೋಧ್ಯೆಗೆ ರವಿಶಂಕರ್  ಗುರೂಜಿ ಭೇಟಿ ನೀಡುತ್ತಿದ್ದಾರೆ. ಅಯೋಧ್ಯೆಯಲ್ಲಿನ ವಿವಾದಿತ ಜಾಗದ ಹಕ್ಕುದಾರರ ಜೊತೆ ರವಿ ಶಂಕರ್ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ರವಿಶಂಕರ್ ಗುರೂಜಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ..

ಮಾತುಕತೆಗೆ ವೇದಿಕೆಯಾಯ್ತು ಬೆಂಗಳೂರು..!

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು ಎಂಬ ವಿಚಾರದ ಚರ್ಚೆ ನಮ್ಮ ಬೆಂಗಳೂರಿನಲ್ಲಿ ನಡೆಯುತ್ತಿದೆ. ವಿವಾದವನ್ನು ಕೋರ್ಟಿನ ಹೊರಗೆ ಬಗೆಹರಿಸಿಕೊಳ್ಳಲು ಬೆಂಗಳೂರಿನಲ್ಲಿರುವ ಆರ್ಟ್​ ಆಫ್​ ಲಿವಿಂಗ್ ಕೇಂದ್ರದಲ್ಲಿ ಸರಣಿ ಮಾತುಕತೆಗಳು ನಡೆಯುತ್ತಿವೆ. ಅಕ್ಟೋಬರ್ 6 ರಂದು ಈ ಬಗ್ಗೆ ಆರ್ಟ್​ ಆಫ್ ಲಿವಿಂಗ್ ಧ್ಯಾನ ಕೇಂದ್ರದಲ್ಲಿ ಮೊದಲ ಮಾತುಕತೆ ನಡೆದಿತ್ತು. ಮಧ್ಯಸ್ಥಿಕೆ ವಹಿಸಿಕೊಳ್ಳುವಂತೆ ಅಯೋಧ್ಯೆಯಿಂದ ಬಂದ ತಂಡವೊಂದು ಶ್ರೀಗಳನ್ನು ವಿನಂತಿಸಿಕೊಂಡಿತ್ತು. ಅದಾದ ನಂತರ ಸರಣಿ ಮಾತುಕತೆ, ಸಂಧಾನಗಳು ನಡೆದಿದ್ದು ಪರಿಹಾರ ಸೂತ್ರ ರೂಪಿಸಲಾಗುತ್ತಿದೆ. ಎರಡು ದಿನಗಳ ಹಿಂದೆ ಆರ್ಟ್​ ಆಫ್ ಲಿವಿಂಗ್ ಧ್ಯಾನ ಕೇಂದ್ರದಲ್ಲಿ ಹಿಂದೂ ಮಹಾ ಸಭಾ, ನಿರ್ಮೋಹಿ ಅಖಾಡ ಮತ್ತು ಸುನ್ನಿ ವಕ್ಫ್​ ಬೋರ್ಡ್​ ಮುಖಂಡರ ಜೊತೆ ಶ್ರೀಗಳು ಚರ್ಚೆ ನಡೆಸಿದ್ದಾರೆ..

ಮಾತುಕತೆಗೆ ಗ್ರೀನ್ ಸಿಗ್ನಲ್ ಕೊಟ್ಟ ಯೋಗಿ..!

ಅಯೋಧ್ಯೆಯಲ್ಲಿನ ವಿವಾದಿತ ಜಾಗದ ಬಗ್ಗೆ ಇರುವ ವಿವಾದ ಬಗೆ ಹರಿಸಲು ಮುಂದಾಗಿರುವ ರವಿಶಂಕರ್ ಗುರೂಜಿ ಮುಂದಾಗಿರುವುದನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸ್ವಾಗತಿಸಿದ್ದಾರೆ. ಕಟ್ಟರ್ ಹಿಂದುತ್ವಾದಿಯಾಗಿರುವ ಯೋಗಿ ಹಲವು ವರ್ಷಗಳಿಂದ ರಾಮಮಂದಿರ ನಿರ್ಮಾಣದ ಪರ ದ್ವನಿಯೆತ್ತುತ್ತಲೇ ಇದ್ದಾರೆ. ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ ಮಾತುಕತೆಯೇ ಪರಿಹಾರ ಎಂದಿರುವ ಸಿಎಂ ಯೋಗಿ ಆದಿತ್ಯನಾಥ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.

 ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡಲು ಶಿಯಾ ವಕ್ಫ್​ ಬೋರ್ಡ್​ ಒಪ್ಪಿಗೆ ಸೂಚಿಸಿದೆ. ಮುಸ್ಲಿಂ ಪ್ರಾಬಲ್ಯವಿರುವ ಸ್ಥಳದಲ್ಲಿ ಬಾಬ್ರಿ ಮಸೀದಿ ನಿರ್ಮಾಣಕ್ಕೆ ಇಂಗಿತ ವ್ಯಕ್ತಪಡಿಸಿದೆ. ಆದ್ರೆ ಸುನ್ನಿ ವಕ್ಫ್​ ಬೋರ್ಡ್​ ಮಾತ್ರ ನ್ಯಾಯಾಲಯದಲ್ಲಿಯೇ ವಿವಾದ ಬಗೆ ಹರಿಸಿಕೊಳ್ಳುವುದಾಗಿ ಪಟ್ಟು ಹಿಡಿದಿದೆ. ಈ ಮಧ್ಯೆ ರವಿಶಂಕರ್ ಗುರೂಜಿ ನಡೆಸುತ್ತಿರುವ ಮಧ್ಯಸ್ಥಿಕೆಗೂ ಕೆಲ ಬಿಜೆಪಿ ಮುಖಂಡರು ಮತ್ತು ಅಯೋಧ್ಯೆಯ ಸಾಧು ಸಂತರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಮಜನ್ಮಭೂಮಿ ಆಂದೋಲನದ ಭಾಗವಾಗಿರದ ರವಿಶಂಕರ್ ಗುರೂಜಿ ಅವರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವುದನ್ನು ಹಲವರು ವಿರೋಧಿಸಿದ್ದಾರೆ.

Follow Us:
Download App:
  • android
  • ios