ಅಯೋಧ್ಯೆಯು ರಾಮಜನ್ಮಭೂಮಿ ಎಂಬ ವಿಚಾರವು ವಿವಾದಾತೀತವಾಗಿದೆ. ಅಯೋಧ್ಯೆಯ ಜಮೀನಿನ ಮಾಲಿಕತ್ವದ ವಿಚಾರದಲ್ಲಿ ಇರುವ ಬಿಕ್ಕಟ್ಟು ಶೀಘ್ರದಲ್ಲಿಯೇ ಬಗೆಹರಿಯುವುದು ಎಂದು ಜಲಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆ.
ಭೂಪಾಲ್ (ಅ.17): ಅಯೋಧ್ಯೆಯು ರಾಮಜನ್ಮಭೂಮಿ ಎಂಬ ವಿಚಾರವು ವಿವಾದಾತೀತವಾಗಿದೆ. ಅಯೋಧ್ಯೆಯ ಜಮೀನಿನ ಮಾಲಿಕತ್ವದ ವಿಚಾರದಲ್ಲಿ ಇರುವ ಬಿಕ್ಕಟ್ಟು ಶೀಘ್ರದಲ್ಲಿಯೇ ಬಗೆಹರಿಯುವುದು ಎಂದು ಜಲಸಂಪನ್ಮೂಲ ಸಚಿವೆ ಉಮಾಭಾರತಿ ಹೇಳಿದ್ದಾರೆ.
ವಿವಾದ ಇರುವುದು ಅಯೋಧ್ಯೆ ರಾಮ ಜನ್ಮಭೂಮಿ ಹೌದೋ ಅಲ್ಲವೋ ಅಂತಲ್ಲ. ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು ಇದು ರಾಮಜನ್ಮಭೂಮಿ ಹೌದು ಎಂದು ತೀರ್ಪು ಹೇಳಿದೆ. ಈ ಜಮೀನು ವಕ್ಫ್ ಮಂಡಳಿಗೆ ಸೇರಿದ್ದೋ ಅಥವಾ ರಾಮಜನ್ಮ ಭೂಮಿ ನ್ಯಾಸಕ್ಕೆ ಸೇರಿದ್ದೋ ಎಂಬುದರ ಕುರಿತಂತೆ ವಿವಾದ ಬಗೆಹರಿಯಬೇಕಿದೆ ಎಂದು ಉಮಾ ಭಾರತಿ ಹೇಳಿದ್ದಾರೆ.
ಬಿಜೆಪಿ ಎಂಪಿ ವಿನಯ್ ಕಟಿಯಾರ್ ರಾಮಜನ್ಮಭೂಮಿ ವಿಚಾರವನ್ನು ಎತ್ತಿದ್ದು ಆ ಜಾಗದಲ್ಲಿ ರಾಮ ಮಂದಿರವನ್ನು ನಿರ್ಮಾಣ ಮಾಡಲು ಲೋಕಸಭೆಯಲ್ಲಿ ಮಸೂದೆ ಮಂಡಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಪಡಿಸಿದ್ದಾರೆ. ರಾಮ ಮಂದಿರವು ಬಿಜೆಪಿಯ ಮೊದಲ ಆದ್ಯತೆ ಎಂದು ಒತ್ತಿ ಹೇಳಿದ್ದಾರೆ.
