ರಾಜ್ಯದಲ್ಲಿ ಈಗಿರುವ  8 ಸಾವಿರ ಸಣ್ಣ ಕೈಗಾರಿಕಾ ಸಂಸ್ಥೆಗಳಲ್ಲಿ ಸಾಧನೆ ಮಾಡಿರುವ ಪ್ರಮುಖರಿಗೆ ಉಜ್ವಲ ಉದ್ಯಮಿ ಪ್ರಶಸ್ತಿ  ನೀಡಿ ಗೌರವಿಸಲಾಗುವುದು.

ಬೆಂಗಳೂರು(ಮಾ.06): ಸುವರ್ಣ ನ್ಯೂಸ್ ಸಹಯೋಗದಿಂದಿಗೆ ಕರ್ನಾಟಕ ಸಣ್ಣ ಕೈಗಾರಿಕಗಳ ಸಂಘ ಕಾಸಿಯಾ ಸಂಸ್ಥೆ ಸಣ್ಣ ಮತ್ತು ಮದ್ಯಮ ಕೈಗಾರಿಕಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಉಜ್ವಲ ಉದ್ಯಮಿ ಪ್ರಶಸ್ತಿ ನೀಡಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಗರದ ಪ್ರೆಸ್​ ಕ್ಲಬ್​ನಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಸಿಯಾ ಸಂಸ್ಥೆಯ ಅಧಿಕಾರಿಗಳು, ರಾಜ್ಯದಲ್ಲಿ ಈಗಿರುವ 8 ಸಾವಿರ ಸಣ್ಣ ಕೈಗಾರಿಕಾ ಸಂಸ್ಥೆಗಳಲ್ಲಿ ಸಾಧನೆ ಮಾಡಿರುವ ಪ್ರಮುಖರಿಗೆ ಉಜ್ವಲ ಉದ್ಯಮಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸಣ್ಣ ಕೈಗಾರಿಕ ಉದ್ಯಮಿಗಳಿಗೆ ಉತ್ತೆಜನ ನೀಡಲು ಈ ವಿಭಿನ್ನವಾದ ಕಾರ್ಯ ಮಾಡಲಾಗುತ್ತಿದೆ. ಇದೇ ತಿಂಗಳ 25 ರಂದು ಕಾಸಿಯಾ ಮುಖ್ಯ ಕಛೇರಿಯಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ.

ಉದ್ಯಮಿಗಳು ಸಲ್ಲಿಸಿದ ಅರ್ಜಿಯನ್ನು ಜೂರಿ ಸಮಿತಿ ಪರಿಶೀಲಿಸಲಿದ್ದು, ಆಯ್ಕೆಯಾದ ಉದ್ಯಮಿಗಳಿಗೆ ಕಾಸಿಯಾ ರತ್ನ, ವರ್ಷದ ಸಣ್ಣ ಮತ್ತು ಮಧ್ಯಮ ಕೈಗಾರಿಕೋದ್ಯಮಿ,ವರ್ಷದ ಮಹಿಳಾ ಕೈಗಾರಿಕೋದ್ಯಮಿ ಹೀಗೆ ಹಲವು ವಿಶೇಷ ಪ್ರಶಸ್ತಿಗಳನ್ನ ನೀಡಿ ಗೌರವಿಸಲಾಗುವುದು.