ಕಳೆದ ವಾರವಷ್ಟೇ ಜಿಲ್ಲಾಡಳಿತ ಮತ್ತು ಪೊಲೀಸರು ಹಲವು ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯಾಗಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದರು.

ಶ್ರೀನಗರ(ಜ. 25): ಜಮ್ಮು-ಕಾಶ್ಮೀರದ ಗಂದರ್'ಬಾಲ್ ಜಿಲ್ಲೆಯಲ್ಲಿ ಭೀಕರ ಹಿಮಪಾತ ಸಂಭವಿಸಿದ್ದು, ಓರ್ವ ಸೈನಿಕ ಸೇರಿ ಐದಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ. ಸೋನಾಮಾರ್ಗ್ ಬಳಿ ಇರುವ ಸೇನಾ ಶಿಬಿರ, ಹಾಗೂ ವಿವಿಧ ಗ್ರಾಮಗಳು ಹಿಮಪಾತಕ್ಕೆ ಸಿಲುಕಿ ಹಾನಿಗೊಂಡಿವೆ. ಗಡಿ ನಿಯಂತ್ರಣ ರೇಖೆಯಲ್ಲಿರುವ ಗುರೆಜ್ ಸೆಕ್ಟರ್'ನಲ್ಲಿನ ಗ್ರಾಮದ ಮನೆಯೊಂದು ಸಂಪೂರ್ಣವಾಗಿ ಮಂಜಿನಡಿ ಸಿಲುಕಿದೆ. ಈ ಮನೆಯ ನಾಲ್ಕು ಸದಸ್ಯರು ಸಾವನ್ನಪಿದ್ದಾರೆನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಶ್ಮೀರ ಕಣಿವೆ ಹಾಗೂ ಹಿಮಾಲಯದ ತಪ್ಪಲಿನಲ್ಲಿ ಹಿಮಪಾತ ಸಂಭವಿಸುವುದು ಸರ್ವೇಸಾಮಾನ್ಯ. ಕಳೆದ ವಾರವಷ್ಟೇ ಜಿಲ್ಲಾಡಳಿತ ಮತ್ತು ಪೊಲೀಸರು ಹಲವು ಗ್ರಾಮಗಳಲ್ಲಿ ಮುನ್ನೆಚ್ಚರಿಕೆಯಾಗಿ ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದರು.