ಮುಕ್ತ ಲೈಂಗಿಕತೆಗೆ ಖ್ಯಾತಿ ಹೊಂದಿರುವ ದೇಶಗಳ ಪೈಕಿ ಒಂದಾದ ಆಸ್ಪ್ರೇಲಿಯಾದಲ್ಲಿ ಸಚಿವರು ಇತರೆ ಸಚಿವರ ಜೊತೆಗೆ ಮತ್ತು ತಮ್ಮ ಕಚೇರಿಯ ಅಧಿಕಾರಿಗಳ ಜೊತೆ ಲೈಂಗಿಕ ಸಂಬಂಧ ಹೊಂದುವುದಕ್ಕೆ ಸರ್ಕಾರ ನಿಷೇಧ ಹೇರಿದೆ.

ಸಿಡ್ನಿ: ಮುಕ್ತ ಲೈಂಗಿಕತೆಗೆ ಖ್ಯಾತಿ ಹೊಂದಿರುವ ದೇಶಗಳ ಪೈಕಿ ಒಂದಾದ ಆಸ್ಪ್ರೇಲಿಯಾದಲ್ಲಿ ಸಚಿವರು ಇತರೆ ಸಚಿವರ ಜೊತೆಗೆ ಮತ್ತು ತಮ್ಮ ಕಚೇರಿಯ ಅಧಿಕಾರಿಗಳ ಜೊತೆ ಲೈಂಗಿಕ ಸಂಬಂಧ ಹೊಂದುವುದಕ್ಕೆ ಸರ್ಕಾರ ನಿಷೇಧ ಹೇರಿದೆ.

ಪ್ರಧಾನಿ ಮಾಲ್ಕಂ ಟರ್ನ್‌ಬುಲ್‌ ಸರ್ಕಾರದಲ್ಲಿ ಸಚಿವರಾಗಿರುವ ಬಾರ್ನ್‌ಬೈ ಜೋಯ್ಸಿ, ತಮ್ಮ ಕಚೇರಿಯ ಸಿಬ್ಬಂದಿ ಜೊತೆ ಅಕ್ರಮ ಸಂಬಂಧ ಹೊಂದುವ ಮೂಲಕ ಅಕೆ ಗರ್ಭಧರಿಸುವಂತೆ ಮಾಡಿದ್ದಾರೆ. ಇದು ಮಾಧ್ಯಮಗಳಲ್ಲಿ ಭಾರೀ ಸುದ್ದಿಯಾಗುತ್ತಿದ್ದಂತೆ ಮುಖಭಂಗಕ್ಕೆ ಒಳಗಾಗಿರುವ ಪ್ರಧಾನಿ ಟರ್ನ್‌ಬುಲ್‌, ಮುಂದಿನ ದಿನಗಳಲ್ಲಿ ಸಚಿವರು, ತಮ್ಮ ಕಚೇರಿ ಸಿಬ್ಬಂದಿ ಜೊತೆ ಸೆಕ್ಸ್‌ ಮಾಡುವುದನ್ನು ನಿಷೇಧಿಸಲಾಗಿದೆ.

ಸಮಾಜ ಒಪ್ಪುವಂಥ ಕೆಲಸಗಳನ್ನು ಮಾತ್ರವೇ ನಾವು ಮಾಡಬೇಕು ಎಂದು ಹೇಳಿದ್ದಾರೆ. ಟರ್ನ್‌ಬುಲ್‌ ಸರ್ಕಾರದಲ್ಲಿ ಜೋಯ್ಸಿ ಅವರ ಪಕ್ಷ ಪಾಲುದಾರನಾಗಿದೆ. ಹೀಗಾಗಿ ಅವರನ್ನು ತೆಗೆದುಹಾಕಿದರೆ ಸರ್ಕಾರಕ್ಕೆ ಧಕ್ಕೆ ಉಂಟಾಗಬಹುದು ಎಂಬ ಭೀತಿ ಟರ್ನ್‌ಬುಲ್‌ ಅವರನ್ನು ಕಾಡುತ್ತಿದೆ.