ಆಸ್ಪ್ರೇಲಿಯಾದಲ್ಲಿ ಈಗ ಬಿಸಿಲ ಝಳ ಜಾಸ್ತಿಯಾಗಿದ್ದು, ಜನರಷ್ಟೇ ಅಲ್ಲ ಪ್ರಾಣಿಗಳು ಸಹ ಮೈ ಮೇಲೆ ನೀರು ಬಿದ್ದರೆ ಸಾಕಪ್ಪಾ ಎನ್ನುವ ಪರಿಸ್ಥಿತಿ. ಕ್ವೀನ್ಸ್‌ಲ್ಯಾಂಡ್‌ ಸನ್‌ ಶೈನ್‌ ಕೋಸ್ಟ್‌ನ ಮನೆಯೊಂದರ ಒಳಗೆ ನುಗ್ಗಿದ ಹೆಬ್ಬಾವೊಂದು ಬಾತ್‌ರೂಮ್‌ನ ಶಾವರ್‌ ಟ್ಯಾಪ್‌ ತಿರುಗಿಸಿ ನೀರಿನಾಟ ಆಡುತ್ತಿತ್ತು!

ಮುಂಜಾನೆ ಸ್ನಾನಕ್ಕೆಂದು ಬಂದ ವೇಳೆ ಹೆಬ್ಬಾವನ್ನು ಕಂಡ ಮನೆಯ ಸದಸ್ಯನೊಬ್ಬ ಹೌಹಾರಿದ್ದಾನೆ. ಕೊನೆಗೆ ಹಾವು ಹಿಡಿಯುವವರನ್ನು ಕರೆಸಿ ಹಾವನ್ನು ಹೊರಗೆ ಹಾಕಲಾಯಿತಂತೆ