Asianet Suvarna News Asianet Suvarna News

ಮಹಿಳೆಗೆ ಕುಟುಕಿತು ಕಮೋಡ್‌ನಲ್ಲಿದ್ದ ಹಾವು!

ಮಧ್ಯರಾತ್ರಿ ಶೌಚಾಲಯಕ್ಕೆ ತೆರಳಿ ಕಮೋಡ್ ಮೇಲೆ ಕುಳಿತ ಮಹಿಳೆಗೆ ಹಾವೊಂದು ಕಚ್ಚಿರುವ ಘಟನೆ ನಡೆದಿದೆ. ಈ ಘಟನೆ ನಡೆದದ್ದೆಲ್ಲಿ? ಮುಂದೇನಾಯ್ತು? ಇಲ್ಲಿದೆ ವಿವರ

australia brisbane helen richards bitten by a snake hiding inside a toilet
Author
Canberra ACT, First Published Jan 28, 2019, 4:53 PM IST

ಆಸ್ಟ್ರೇಲಿಯಾ ಬ್ರಿಸ್ಬೇನ್‌ನ ಮನೆಯೊಂದರ ಕಮೋಡ್‌ನಲ್ಲಿ ನಡೆದ ಘಟನೆಯೊಂದು ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮಧ್ಯರಾತ್ರಿ ಮಹಿಳೆಯೊಬ್ಬಳು ಟಾಯ್ಲೆಟ್‌ಗೆ ತೆರಳಿದ್ದಾಳೆ, ಈ ವೇಳೆ ಹಾವು ಕಮೋಡ್ ಒಳಗೆ ಕುಳಿತಿತ್ತು. ಆದರೆ ಇದನ್ನು ಗಮನಿಸದ ಮಹಿಳೆ ಕಮೋಡ್ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಹಾವು ಆಕೆಗೆ ಕಚ್ಚಿದೆ. 

BBC ಪ್ರಸಾರ ಮಾಡಿದ ವರದಿಯನ್ವಯ 59 ವರ್ಷದ ಹೆಲೆನ್ ರಿಚರ್ಡ್ಸ್ ಎಂಬವರಿಗೆ ಹಾವು ಕಚ್ಚಿದೆ. ಮಂಗಳವಾರದಂದು ಈ ಘಟನೆ ನಡೆದಿದ್ದು, ಮಹಿಳೆ ಟಾಯ್ಲೆಟ್‌ಗೆ ಹೋದ ಸಂದರ್ಭದಲ್ಲಿ ಲೈಟ್ ಹಾಕದಿರುವುದೇ ಈ ಅನಾಹುತ ಸಂಭವಿಸಲು ಕಾರಣವೆನ್ನಲಾಗಿದೆ. ಹಾವು ವಿಷಕಾರಿಯಲ್ಲದಿರುವುದರಿಂದ ಯಾವುದೇ ಅಪಾಯವಾಗಿಲ್ಲ. 

ಸ್ನ್ಯಾಕ್ ಕ್ಯಾಚರ್ ಈ ಘಟನೆಯನ್ನು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದು, 'ಮಧ್ಯರಾತ್ರಿ ಕಮೋಡ್ ಮೇಲೆ ಕುಳಿತಿದ್ದ ಮಹಿಳೆಗೆ ತನಗ್ಯಾರೋ ಕೆಳಗಿನಿಂದ ಕಚ್ಚುತ್ತಿದ್ದಾರೆ ಎಂಬ ಅನುಭವವಾಗಿದೆ'. ತನಗೆ ಕಚ್ಚಿದ್ದು ಹಾವು ಎಂದು ತಿಳಿದ ಮಹಿಳೆ ಉರಗ ತಜ್ಞರನ್ನು ಕರೆಸಿ, ಅದನ್ನು ಕಮೋಡ್‌ನಿಂದ ಹೊರ ತಂದಿದ್ದಾರೆ. ಹೆಲೆನ್ರನ್ನು ಕಚ್ಚಿದ್ದು ಬರೋಬ್ಬರಿ 5 ಅಡಿ ಉದ್ದದ ಹಾವು ಎಂಬುವುದು ಮರೆಯುವಂತಿಲ್ಲ.

ತಮ್ಮಆನುಭವವನ್ನು ವಿವರಿಸಿರುವ ಹೆಲೆನ್ 'ನನಗೇನೋ ಕಚ್ಚುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ನಾನು ಎದ್ದು ನಿಂತುಕೊಂಡೆ. ಕಮೋಡ್ ಒಳಗೆ ನೋಡಿದಾಗ ಹಾವಿತ್ತು' ಎಂದಿದ್ದಾರೆ.

ಘಟನೆಯ ಕುರಿತಾಗಿ ಮಾತನಾಡಿದ ಉರಗ ತಜ್ಞ 'ಮಹಿಳೆ ಕುಳಿತುಕೊಳ್ಳುತ್ತಿದ್ದಂತೆಯೇ ಹೊರಗೆ ಹೋಗುವ ದಾರಿ ಕಾಣದ ಹಾವು ಬೆಚ್ಚಿ ಬಿದ್ದಿರಬಹುದು. ಹೀಗಾಗಿ ಮಹಿಳೆಗೆ ಕಚ್ಚಿದೆ' ಎಂದಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಈ ಪೋಸ್ಟ್ ಬಹಳಷ್ಟು ವೈರಲ್ ಆಗುತ್ತಿದೆ. ಕೇಳಿದವರೆಲ್ಲರೂ ಗಾಬರಿಗೊಂಡಿದ್ದಾರೆ. ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ವ್ಯಕ್ತಿಯೊಬ್ಬ 'ಲೈಟ್ ಇದ್ದರೂ ನಾನು ಕಮೋಡ್ ಒಳಗೆ ನೋಡುವ ಅಭ್ಯಾಸ ನನಗಿರಲಿಲ್ಲ' ಎಂದಿದ್ದಾರೆ. ಸದ್ಯ ಹಾವನ್ನು ಕಾಡಿಗೆ ಬಿಡಲಾಗಿದೆ.

Follow Us:
Download App:
  • android
  • ios