ಬಾಂಗ್ಲಾ ದೇಶದಲ್ಲಿ ವಿಮಾನ ಹೈಜಾಕ್ ಯತ್ನ! ಬಾಂಗ್ಲಾ ದೇಶದ ಬಿಮಾನ್ ವಿಮಾನ ಹೈಜಾಕ್ ಮಾಡಲು ಯತ್ನ!ಗನ್ನಿಂದ ಬೆದರಿಸಿ ವಿಮಾನ ಹೈಜಾಕ್ ಮಾಡಲು ಯತ್ನಿಸಿದ ವ್ಯಕ್ತಿ .
ಢಾಕಾ, [ಫೆ.24]: ಡಾಕಾ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ದುಬೈಗೆಸಂಚರಿಸುತ್ತಿದ್ದ ಬಿಮನ್ ಬಿಜಿ 147 ವಿಮಾನವನ್ನ ಹೈಜಾಕ್ ಮಾಡಲು ಖದೀಮರು ಯತ್ನಿಸಿದ್ದಾರೆ.
AFP: Attempt to hijack Dubai-bound plane in Bangladesh pic.twitter.com/T08qeJwPF0
— ANI (@ANI) February 24, 2019
ವಿಮಾನದಲ್ಲಿದ್ದ ಒಬ್ಬ ಗನ್ಮ್ಯಾನ್, ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದ ಕಾರಣ ಚಿತ್ತಗಾಂಗ್ನ ಶಾ ಅಮಾನತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡ್ ಮಾಡಲಾಗಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.
ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಅಧಿಕಾರಿಗಳು ಅದನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅದರಲ್ಲಿದ್ದ ಎಲ್ಲ ಪ್ರಯಾಣಿಕರನ್ನೂ ಸುರಕ್ಷಿತವಾಗಿ ಇಳಿಸಲಾಗಿದೆ. ಆದರೆ ಆ ಗನ್ಮ್ಯಾನ್ ಏರ್ಪೋರ್ಟ್ ಆಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 24, 2019, 7:59 PM IST