Asianet Suvarna News Asianet Suvarna News

ಎಟಿಎಂ'ನಲ್ಲಿ ವಿತ್'ಡ್ರಾ, ವಿನಿಮಯ ಮಾಡಿಕೊಳ್ಳುವ ಮಿತಿ ಏರಿಕೆ

ಸರ್ಕಾರಿ ನಿಯಂತ್ರಿತ ಆಸ್ಪತ್ರೆಗಳು,ಸಾರಿಗೆ, ಕ್ಯಾಟರಿಂಗ್ ಸೇರಿದಂತೆ ಮುಂತಾದ ದಿನನಿತ್ಯದ ಸೇವಾ ಸಂಸ್ಥೆಗಳು ಚೆಕ್'ಗಳು, ಡಿಡಿಗಳು ಹಾಗೂ ಆನ್'ಲೈನ್ ಪಾವತಿಯನ್ನು ಸ್ವೀಕರಿಸದಿದ್ದರೆ ಜಿಲ್ಲಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ದೂರನ್ನು ನೀಡಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ.

ATM withdrawal limit increased

ನವದೆಹಲಿ(ನ.13): ನೋಟು ರದ್ದತಿಯ ಪರಿಣಾಮ  ವಿತ್'ಡ್ರಾ ಹಾಗೂ ವಿನಿಮಯ ಮಾಡಿಕೊಳ್ಳುವ ಮಿತಿಯನ್ನು ಕೇಂದ್ರ ಸರ್ಕಾರ ಏರಿಸಿದೆ. ದಿನವೊಂದಕ್ಕೆ 2 ಸಾವಿರದಿಂದ 2.500, ವಾರಕ್ಕೆ 20 ಸಾವಿರದಿಂದ 24 ಸಾವಿರಕ್ಕೆ ಏರಿಸಲಾಗಿದೆ. ಹಾಗೂ ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳುವ ಮಿತಿಯನ್ನು ದಿನವೊಂದಕ್ಕೆ 4 ಸಾವಿರದಿಂದ 4,500ಕ್ಕೆ ಹೆಚ್ಚಿಸಲಾಗಿದೆ.

ಕಳೆದ 4 ದಿನದಿಂದ ದೇಶದಾದ್ಯಂತವಿರುವ ಬ್ಯಾಂಕುಗಳಿಗೆ ಸಾರ್ವಜನಿಕರು 3 ಲಕ್ಷ ಕೋಟಿ ರೂ. 500 ಮತ್ತು 1 ಸಾವಿರ ಹಳೆಯ ನೋಟುಗಳು ಠೇವಣಿಯಿಟ್ಟಿದ್ದು, ಒಟ್ಟು 21 ಕೋಟಿಯಷ್ಟು ವಹಿವಾಟು ನಡೆದಿದೆ. ಸರ್ಕಾರಿ ನಿಯಂತ್ರಿತ ಆಸ್ಪತ್ರೆಗಳು,ಸಾರಿಗೆ, ಕ್ಯಾಟರಿಂಗ್ ಸೇರಿದಂತೆ ಮುಂತಾದ ದಿನನಿತ್ಯದ ಸೇವಾ ಸಂಸ್ಥೆಗಳು ಚೆಕ್'ಗಳು, ಡಿಡಿಗಳು ಹಾಗೂ ಆನ್'ಲೈನ್ ಪಾವತಿಯನ್ನು ಸ್ವೀಕರಿಸದಿದ್ದರೆ ಜಿಲ್ಲಾಧಿಕಾರಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಗೆ ದೂರನ್ನು ನೀಡಬೇಕೆಂದು ಕೇಂದ್ರ ಸರ್ಕಾರ ತಿಳಿಸಿದೆ.

Follow Us:
Download App:
  • android
  • ios