ನವದೆಹಲಿ[ಆ.18]  ಅದು 1940ರ ದಶಕ ಅಟಲ್ ಬಿಹಾರಿ ವಾಜಪೇಯಿ ಅವರು ಕಾನ್ಪುರ್‌ದ ಡಿಎವಿ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದರು. ಈ ವೇಳೆ ವಾಜಪೇಯಿ ಅವರಿಗೆ ಮದುವೆ ಮಾಡಬೇಕು ಎಂದು ಅವರ ಪಾಲಕರು ಹೆಣ್ಣು ನೋಡಲು ಆರಂಭಿಸಿದ್ದು.

ಇದನ್ನು ತಿಳಿದ ವಾಜಪೇಯಿ ಸ್ನೇಹಿತ ರಾಯಪುರದಲ್ಲಿರುವ ಸ್ನೇಹಿತ ಗೋರೆ ಲಾಲ್ ತ್ರಿಪಾಠಿ ಅವರ ಮನೆಯಲ್ಲಿ ಮೂರು ದಿನಗಳ ಕಾಲ ಅವಿತು ಕುಳಿತಿದ್ದರಂತೆ. ಹೀಗಂತ, ತ್ರಿಪಾಠಿ ಅವರ ಪುತ್ರ ವಿಜಯ್ ಪ್ರಕಾಶ್ ನೆನಪು ಮಾಡಿಕೊಳ್ಳುತ್ತಾರೆ.

ಅಜಾತಶತ್ರುವನ್ನು ಕಳೆದುಕೊಂಡ ಇಡೀ ದೇಶ ಶೋಕ ಸಾಗರದಲ್ಲಿಯೇ ಇದೆ. ಅವರ ಜೀವನದ ಒಂದೊಂದೆ ಅಧ್ಯಾಯಗಳು. ಸ್ವಾರಸ್ಯಕರ ಸಂಗತಿಗಳು ಹೊರಬರುತ್ತಲೇ ಇವೆ.