ಬೊಹರಾ ಸಮುದಾಯದ ದೇಶಪ್ರೇಮ ನಮಗೆಲ್ಲಾ ಮಾದರಿ! ಇಂದೋರ್'ನ ಸೈಫಿ ಮಸೀದಿಯಲ್ಲಿ ದಾವೂದಿ ಬೊಹರಾ ಸಮುದಾಯದ ಸಭೆ! ಬೊಹರಾ ಸಮುದಾಯದ ಕೊಡುಗೆ ಸ್ಮರಿಸಿದ ಪ್ರಧಾನಿ ನರೇಂದ್ರ ಮೋದಿ! ಬೊಹರಾ ಸಮಾಜದ ಆಲೋಚನೆ ದೇಶವನ್ನು ಮತ್ತಷ್ಟು ಸದೃಢಗೊಳಿಸುತ್ತದೆ! ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ವಿಚಾರಗಳಲ್ಲಿ ಬೊಹರಾ ಸಮುದಾಯದ ಕೊಡುಗೆ
ಇಂಧೋರ್(ಸೆ.14): ದಾವೂದಿ ಬೊಹರಾ ದೇಶಪ್ರೇಮ ಇಡೀ ಭಾರತ ದೇಶಕ್ಕೆ ಉದಾಹರಣೆಯಾಗಿದ್ದು, ಶಾಂತಿ ಸಂದೇಶದೊಂದಿಗೆ ಬೊಹರಾ ಸಮಾಜ ಜೀವನ ನಡೆಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಧ್ಯಪ್ರದೇಶದ ಇಂದೋರ್'ನ ಸೈಫಿ ಮಸೀದಿಯಲ್ಲಿ ದಾವೂದಿ ಬೊಹರಾ ಸಮುದಾಯದ ಸಭೆಯಲ್ಲಿ ಭಾಗಿಯಾದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಬೊಹರಾ ಸಮಾಜವನ್ನು ಕೊಂಡಾದಿದ್ದಾರೆ.
ಸಭೆಯಲ್ಲಿ ಮಾತನಾಡಿದ ಮೋದಿ, ರಾಷ್ಟ್ರ ನಿರ್ಮಾಣಕ್ಕಾಗಿ ನನಗೆ ಅವಕಾಶ ನೀಡಿದ್ದೀರಿ. ನನ್ನ ಪ್ರತಿ ಹೆಜ್ಜೆಗೂ ಬೊಹರಾ ಸಮುದಾಯ ಹೆಗಲು ನೀಡಿದೆ. ನಿಮ್ಮೆಲ್ಲರ ಮಧ್ಯೆ ನಿಂತು ಮಾತನಾಡುವುದು ನನಗೆ ಹೊಸ ಅನುಭವವನ್ನು ನೀಡುತ್ತಿದೆ. ಇದಕ್ಕೆ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಜನತೆಗೆ ಧನ್ಯವಾದಗಳನ್ನು ಹೇಳುತ್ತೇನೆ. ಇಮಾಂ ಹುಸೇನರ ಪವಿತ್ರ ಸಂದೇಶವನ್ನು ನಾವೆಲ್ಲರೂ ಅಳವಡಿಸಿಕೊಳ್ಳೋಣ ಎಂದು ಕರೆ ನೀಡಿದರು.
ಬೊಹರಾ ಸಮಾಜದ ಆಲೋಚನೆ ದೇಶವನ್ನು ಮತ್ತಷ್ಟು ಸದೃಢಗೊಳಿಸುತ್ತದೆ. ಗುಜರಾತ್ ರಾಜ್ಯದಲ್ಲಿ ಪ್ರಕೃತಿ ವಿಕೋಪದ ವೇಳೆ ಅಗತ್ಯ ಸಹಕಾರ ನೀಡುವ ಮೂಲಕ ಬೊಹರಾ ಸಮುದಾಯ ಸಾಕಷ್ಟು ಬೆಂಬಲ ನೀಡಿದೆ. ಈ ಸಮುದಾಯ ವಿಶ್ವವೇ ಒಂದು ಕುಟುಂಬವೆಂದು ಭಾವಿಸಿದೆ ಎಂದು ಪ್ರಧಾನಿ ಹೊಗಳಿದ್ದಾರೆ.
ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ವಿಚಾರಗಳಲ್ಲಿ ನಿಮ್ಮ ಪ್ರಯತ್ನಗಳು ಶ್ಲಾಘನೀಯ. ದಾವೂದಿ ಬೊಹರಾ ಸಮುದಾಯದ ಜೊತೆ ಬರಲು ಉತ್ಸುಕನಾಗಿದ್ದೇನೆ. ಶಿಕ್ಷಣ, ಕೌಶಲ್ಯಾಭಿವೃದ್ಧಿಗೂ ನಿಮ್ಮ ಸಮುದಾಯ ಕೈಜೋಡಿಸಿದೆ. ಹೃದಯ ಹಾಗೂ ಮನಸ್ಸನ್ನು ಸ್ವಚ್ಛ ಮಾಡಬೇಕಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟರು.
"
