ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧ ಹಿನ್ನೆಲೆಯಲ್ಲಿ ಮಾತನಾಡಿದ  ಸಿಎಂ ಸಿದ್ದರಾಮಯ್ಯ ಯಾರೇ ವಿರೋಧ ಮಾಡಿದರು ಟಿಪ್ಪು ಜಯಂತಿ ನಡೆದೇ ನಡೆಯುತ್ತೆ ಎಂದು ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಹೇಳಿಕೆ ನೀಡಿದ್ದಾರೆ.

ಬೆಂಗಳೂರು (ಅ.22): ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ವಿರೋಧ ಹಿನ್ನೆಲೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಯಾರೇ ವಿರೋಧ ಮಾಡಿದರು ಟಿಪ್ಪು ಜಯಂತಿ ನಡೆದೇ ನಡೆಯುತ್ತೆ ಎಂದು ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಹೇಳಿಕೆ ನೀಡಿದ್ದಾರೆ.

ಸರಕಾರಿ‌ ಕಾರ್ಯಕ್ರಮ ನಡೆಸಲು ಯಾರದ್ದೇ ಅನುಮತಿಯ ಅಗತ್ಯ ಇಲ್ಲ. ಯಡಿಯೂರಪ್ಪ ಟಿಪ್ಪು ವೇಷ ಧರಿಸಿ, ಖಡ್ಗ ಹಿಡಿದು ಟಿಪ್ಪು ಜಯಂತಿ ಆಚರಿಸಿಲ್ವಾ? ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿದ್ದರು. ಅದನ್ನೇಕೆ ಬಿಜೆಪಿಯವರು ವಿರೋಧಿಸುವುದಿಲ್ಲ? ಇಂಥ ರಾಜಕೀಯಕ್ಕೆ ಸೊಪ್ಪು ಹಾಕುವ ಅಗತ್ಯ ಇಲ್ಲ. ಟಿಪ್ಪು ಜಯಂತಿ ವಿರೋಧಿಸುವವರಿಗೆ ಇತಿಹಾಸ ಗೊತ್ತಿಲ್ಲ. ಟಿಪ್ಪು ಜಯಂತಿ‌ ಆಚರಣೆಯಿಂದ ಕಾನೂನು ಸುವ್ಯವಸ್ಥೆ ಹದಗೆಡುವುದಿಲ್ಲ. ಒಂದಿಬ್ಬರ ವಿರೋಧದಿಂದ ಏನೂ ಆಗುವುದಿಲ್ಲ. ಶಿಷ್ಟಾಚಾರದಂತೆ ಆಹ್ವಾನ ಪತ್ರದಲ್ಲಿ ಎಲ್ಲರ ಹೆಸರನ್ನೂ ಹಾಕಿದ್ದಾರೆ. ಯಾರು ಬರುತ್ತಾರೋ ಬರಲಿ. ಬಾರದವರನ್ನು ಕರೆದು ತರಲು ಸಾಧ್ಯವಿಲ್ಲ. ಬರುವುದು, ಬಿಡುವುದು ಅವರವರಿಗೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.