Asianet Suvarna News Asianet Suvarna News

108 ವಾಹನದಲ್ಲೇ ಸ್ನೇಹಿತನಿಗೆ ನರಕ ದರ್ಶನ!: ‘ನನಗೆ ಸಿಎಂ’ ಗೊತ್ತು ಎಂದು ಥಳಿಸಿದ ಸ್ನೇಹಿತರು

ಗಲಾಟೆಯಲ್ಲಿ ಗಾಯಗೊಂಡು ವ್ಯಕ್ತಿಯನ್ನ 108 ಆ್ಯಂಬುಲೆನ್ಸ್​ ವಾಹನದಲ್ಲಿ ಕೊಂಡೊಯ್ಯುವ ವೇಳೆ ಗಾಯಾಳು ಮೇಲೆ ಸ್ನೇಹಿತರಿಬ್ಬರು ಕುಡಿದ ಮತ್ತಿನಲ್ಲಿ ಮನಬಂದಂತೆ ಥಳಿಸಿದ್ದಾರೆ.

Assault In 108 Ambulence
  • Facebook
  • Twitter
  • Whatsapp

ಬಾಗಲಕೋಟೆ(ಎ.22): ಗಲಾಟೆಯಲ್ಲಿ ಗಾಯಗೊಂಡು ವ್ಯಕ್ತಿಯನ್ನ 108 ಆ್ಯಂಬುಲೆನ್ಸ್​ ವಾಹನದಲ್ಲಿ ಕೊಂಡೊಯ್ಯುವ ವೇಳೆ ಗಾಯಾಳು ಮೇಲೆ ಸ್ನೇಹಿತರಿಬ್ಬರು ಕುಡಿದ ಮತ್ತಿನಲ್ಲಿ ಮನಬಂದಂತೆ ಥಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಕಲಾದಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಹೊಸಕೋಟಿ ಗ್ರಾಮದ ಲಂಕೆಪ್ಪ ಎಂಬಾತ ಗಾಯಾಳು ಆಗಿದ್ದು, ಆತನ ಸ್ನೇಹಿತರೇ ಌಂಬುಲೆನ್ಸ್​​​'ನಲ್ಲಿ ಥಳಿಸಿದ್ದಾರೆ. ಇನ್ನು ಈ ಮೂವರು ಸ್ನೇಹಿತರು ಜಾತ್ರೆಗೆ ಹೋಗಿ ಬರುವ ವೇಳೆ ಕಲಾದಗಿ ಬಳಿ ಕುಡಿದು ಜಗಳವಾಡಿಕೊಂಡಿದ್ದಾರೆ.

ಈ ವೇಳೆ ತೀವ್ರವಾಗಿ ಗಾಯಗೊಂಡ ಲಂಕೆಪ್ಪನನ್ನ 108 ಌಂಬುಲೆನ್ಸ್​ ವಾಹನ ತರಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ದಾರಿ ಮಧ್ಯೆ ಆತನಿಗೆ ಥಳಿಸಿದ್ದಾರೆ. ಅಲ್ಲದೆ ನಮಗೆ ಸಿಎಂ ಸಿದ್ದರಾಮಯ್ಯಗೊತ್ತು, ಶಾಸಕ ಚಿಮ್ಮನಕಟ್ಟಿಯವರೂ ಗೊತ್ತು, ನಮಗೆ ಯಾರೇನು ಮಾಡ್ತಾರೆ ಅಂತ ಉದ್ಘರಿಸಿದ್ದಾರೆ. ಈ ಮಧ್ಯೆ ಆತನನ್ನ ಬಾಗಲಕೋಟೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಬಳಿಕ ಚಿಕಿತ್ಸೆ ಪಡೆದು ಲಂಕೆಪ್ಪ ಗುಣಮುಖನಾಗಿದ್ದು, ಆತನ ಸಂಬಂಧಿಕರು ಥಳಿಸಿದವರ ವಿರುದ್ಧ ಕಲಾದಗಿ ಪೋಲಿಸ ಠಾಣೆಯಲ್ಲಿ ದಾಖಲಿಸಿದ್ದಾರೆ

Follow Us:
Download App:
  • android
  • ios