ಇದೀಗ ಅಸ್ಸಾಂನಲ್ಲಿ ಒಟ್ಟು  40 ಲಕ್ಷ ಮಂದಿಯ ಭವಿಷ್ಯ ಅತಂತ್ರವಾಗಿದೇ. ಅವರು ಭಾರತೀಯ ನಾಗರಿಕರೇ ಅಲ್ಲ ಎಂದು ದಾಖಲಾತಿಗಳು ಹೇಳುತ್ತಿವೆ. 

ಗುವಾಹಟಿ: ಅಕ್ರಮ ಬಾಂಗ್ಲಾದೇಶೀಯರ ವಲಸೆಯಿಂದ ತತ್ತರಿಸಿರುವ ಅಸ್ಸಾಂನಲ್ಲಿ ಇರುವವರು ನಿಜವಾದ ಅಸ್ಸಾಮಿಗಳು ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸುವ ಅಸ್ಸಾಂನ ‘ರಾಷ್ಟ್ರೀಯ ನಾಗರಿಕ ರಿಜಿಸ್ಟ್ರಾರ್’ನ ಅಂತಿಮ ಕರಡು ಇಂದು ಬಿಡುಗಡೆಯಾಗಿದೆ.

ಎಲ್ಲ ಎನ್‌ಆರ್‌ಸಿ ಕೇಂದ್ರಗಳಲ್ಲಿ ಪಟ್ಟಿ ಬಹಿರಂಗವಾಗಿದ್ದು, ಅರ್ಜಿ ಸಲ್ಲಿಸಿರುವವರು ತಮ್ಮ ಹೆಸರು ಅದರಲ್ಲಿ ಇದೆಯೋ ಇಲ್ಲವೋ ಎಂದು ತಪಾಸಿಸಿಕೊಂಡಿದ್ದಾರೆ. 

3.29 ಕೋಟಿ ಜನರಪೈಕಿ ಸೋಮವಾರ 2.9 ಕೋಟಿ ಜನರ ಪಟ್ಟಿ ಪ್ರಕಟವಾಗಿದೆ. ಇದರಲ್ಲಿ 40.07 ಲಕ್ಷ ಮಂದಿಯ ಅರ್ಜಿಗಳು ದಾಖಲಾತಿಗಳಿಗೆ ಹೊಂದಾಣಿಕೆಯಾಗಿಲ್ಲ. ಇದರಿಂದ ಇವರು ಭಾರತೀಯರೇ ಅಲ್ಲ ಎನ್ನುವುದು ಸಾಬೀತಾಗಿದೆ. 

ಯಾರ ಹೆಸರು ದಾಖಲಾತಿಗಳಿಗೆ ಹೊಂದಾಣಿಕೆಯಾಗಿಲ್ಲವೋ ಈ ಬಗ್ಗೆ ಆಕ್ಷೇಪಣಾ ಅರ್ಜಿ ಸಲ್ಲಿಸಲು ಆಗಸ್ಟ್ 30ರಿಂದ ಸೆಪ್ಟೆಂಬರ್ 28ರವರೆಗೆ ಸಮಯಾವಕಾಶ ಒದಗಿಸಲಾಗಿದೆ.