ಮೂತ್ರ ಪರೀಕ್ಷೆಗೆಂದು ಆಸ್ಪತ್ರೆಗೆ ಹೋದ ರೈತಗೆ ಆಸ್ಪತ್ರೆಗೆ ನೀಡಿದ ವರದಿಯು ಬಿಗ್ ಶಾಕ್ ನೀಡಿದೆ. 

ಗೋಲಘಾಟ್ : ಅನಾರೋಗ್ಯದಿಂದ ಮೂತ್ರ ಪರೀಕ್ಷೆಗೆ ಒಳಗಾದ ರೈತ ನೋರ್ವ ಗರ್ಭ ಧರಿಸಿದ್ದಾರೆ ಎಂಬುದಾಗಿ ವೈದ್ಯಕೀಯ ವರದಿ ನೀಡಿದ ವಿಚಿತ್ರ ಘಟನೆ ಅಸ್ಸಾಂ ರಾಜ್ಯದ ಗೋಲಘಾಟ್ ಎಂಬಲ್ಲಿ ನಡೆದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೆಲ ದಿನಗಳಿಂದ ಅನಾರೋಗ್ಯಕ್ಕೊಳಗಾಗಿದ್ದ ರೈತ ಜೋಗೇಶ್ವರ್ ಬೋರಾ(42 ) ಎಂಬ ರೈತ, ಸಿಎಂ ಅವರ ಉಚಿತ ಪರೀಕ್ಷೆ ಸೇವೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೂತ್ರ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಬೋರಾ ಗರ್ಭ ಧರಿಸಿದ್ದಾರೆ ಎಂದು ವರದಿ ನೀಡಲಾಗಿತ್ತು. 

ಇದನ್ನು ಮೆಡಿಕಲ್ ಮಾಲೀಕರಿಗೆ ತೋರಿಸುವ ಮುನ್ನ, ಈ ವರದಿಯಲ್ಲಿ ಏನಿದೆ ಎಂಬುದೇ ಗೊತ್ತಿರಲಿಲ್ಲ. ಬಳಿಕ ಮೆಡಿಕಲ್ ಮಾಲೀಕನವರಿಂದ ತಿಳಿದುಕೊಂಡೆ. ಕೊನೆಗೆ ಖಾಸಗಿ ಆಸ್ಪತ್ರೆಯಿಂದ ಈ ವರದಿ ದೋಷ ಪೂರಿತ ಎಂದು ತಿಳಿಯಿತು ಎಂದಿದ್ದಾರೆ ಬೋರಾ.