ಮೆರವಣಿಗೆ ಮೇಲೆ ಆನೆ ಮೇಲಿಂದ ಬಿದ್ದ ಡೆಪ್ಯೂಟಿ ಸ್ಪೀಕರ್ ! ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ! ಅಸ್ಸಾಂ ನೂತನ ಡೆಪ್ಯೂಟಿ ಸ್ಪೀಕರ್ ಕೃಪಾನಾಥ್ ಮಲ್ಲಾ! ಸ್ವಕ್ಷೇತ್ರ ರಾತಾಬಾರಿಯಲ್ಲಿ ನಡೆದ ಭವ್ಯ ಮೆರವಣಿಗೆ!ಆನೆ ಮೇಲಿಂದ ಬಿದ್ದು ನಗುತ್ತಿದ್ದ ಮಲ್ಲಾ ವಿಡಿಯೋ ವೈರಲ್
ರಾತಾಬಾರಿ(ಅ.8): ಮೆರವಣಿಗೆ ವೇಳೆ ಅಸ್ಸಾಂ ನೂತನ ಡೆಪ್ಯೂಟಿ ಸ್ಪೀಕರ್ ಕೃಪಾನಾಥ್ ಮಲ್ಲಾ ಆಯತಪ್ಪಿ ಆನೆ ಮೇಲಿಂದ ಕೆಳಗೆ ಬಿದ್ದ ಘಟನೆ ನಡೆದಿದ್ದು, ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ."
ಅಕ್ಟೋಬರ್ 6ರಂದು ಈ ಘಟನೆ ನಡೆದಿದ್ದು, ಬಿಜೆಪಿ ಶಾಸಕರಾಗಿರುವ ಕೃಪಾನಾಥ್ ಕರೀಂಗಂಜ್ ಜಿಲ್ಲೆಯಲ್ಲಿರುವ ತಮ್ಮ ಸ್ವಕ್ಷೇತ್ರ ರಾತಾಬಾರಿಯಲ್ಲಿ ಅಭಿಮಾನಿಗಳು ಅವರಿಗೆ ಭವ್ಯ ಸ್ವಾಗತ ನೀಡಲು ಆನೆಯ ಮೇಲೆ ಕುಳ್ಳಿರಿಸಿದ್ದರು.
ಆನೆ ಮೇಲೆ ಕೂರಿಸಿ ಮೆರವಣಿಗೆ ಕರೆದೊಯ್ಯುತ್ತಿದ್ದಾಗ ಈ ಘಟನೆ ನಡೆದಿದೆ. ಆನೆಯಿಂದ ಕೆಳಗೆ ಬೀಳುವ ವಿಡಿಯೋ ಮೊಬೈಲ್ನಲ್ಲಿ ಸೆರೆಯಾಗಿದ್ದು, ಉಪ ಸಭಾಧ್ಯಕ್ಷರಿಗೆ ಘಟನೆ ವೇಳೆ ಯಾವುದೇ ಗಾಯಗಳಾಗಿಲ್ಲ.
ಆನೆ ಮೇಲೆ ಕುಳಿತಿದ್ದ ಮಾವುತ ಕೂಡ ಕೃಪಾನಾಥರ ಜತೆ ಕೆಳಗೆ ಬಿದ್ದಿದ್ದು, ನೆರೆದಿದ್ದವರು ತಕ್ಷಣ ಕೃಪಾನಾಥ ಅವರ ಸಹಾಯಕ್ಕೆ ಮುಂದಾದರು.
