Asianet Suvarna News Asianet Suvarna News

ಕೇಜ್ರಿವಾಲ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಕೋರ್ಟ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಮಾಡಿದ್ದ ಟ್ವೀಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ವಾರಂಟ್ ಹೊರಡಿಸಿದ್ದು, ಮೇ.10ರೊಳಗಾಗಿ ಕೋರ್ಟ್'ಗೆ ಹಾಜರಾಗಬೇಕೆಂದು ಆದೇಶಿಸಿದೆ.

Assam court issues bailable arrest warrant against Arvind Kejriwal

ಡಿಂಪು(ಅಸ್ಸಾಂ): ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ವಿರುದ್ಧ ಅಸ್ಸಾಂ'ನ ಡಿಂಪುವಿನ ಮೊದಲ ದರ್ಜೆ ಮ್ಯಾಜಿಸ್ಟ್ರೇಟ್ ಕೋರ್ಟ್ 10 ಸಾವಿರ ಬಾಂಡ್'ನ ಜಾಮೀನು ಸಹಿತ ವಾರಂಟ್ ಹೊರಡಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರು ಮಾಡಿದ್ದ ಟ್ವೀಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ವಾರಂಟ್ ಹೊರಡಿಸಿದ್ದು, ಮೇ.10ರೊಳಗಾಗಿ ಕೋರ್ಟ್'ಗೆ ಹಾಜರಾಗಬೇಕೆಂದು ಆದೇಶಿಸಿದೆ.

ದೆಹಲಿ ಮುಖ್ಯಮಂತ್ರಿ ಪ್ರಧಾನಿ ವಿರುದ್ಧ ಮಾಡಿದ್ದ ಟ್ವೀಟ್'ಗೆ ಸಂಬಂಧಿಸಿದಂತೆ  ಅಸ್ಸಾಂ'ನ ಬಿಜೆಪಿ ನಾಯಕ  ಸೂರ್ಜಯ್ಯ ರೋಗ್ಪಾರ್ 2016 ಡಿಸೆಂಬರ್ 26 ರಂದು ಸ್ಥಳೀಯ ಕೋರ್ಟ್'ನಲ್ಲಿ ಮಾನನಷ್ಟ ಮುಕದ್ದಮೆ ಹೊರಡಿಸಿದ್ದರು.

ಈ ಮೊದಲು ಕೋರ್ಟ್ ಕೂಡ ಜನವರಿ 30ರಂದು ಕೋರ್ಟ್'ಗೆ ಹಾಜರಾಗುವಂತೆ ಸಮನ್ಸ್ ಕೂಡ ಹೊರಡಿಸಿತ್ತು. ಎಎಪಿ ಪರ ವಕೀಲರಾದ  ಗುರುಪ್ರೀತ್ ಸಿಂಗ್ ಉಪ್ಪಾಲ್ ಏಪ್ರಿಲ್' 23 ರಂದು  ದೆಹಲಿ ಮುನಿಸಿಪಾಲ್ ಚುನಾವಣೆಯಿರುವುದರಿಂದ ಮುಖ್ಯಮಂತ್ರಿಗಳು ದೆಹಲಿ ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಪ್ರಧಾನಿ ಮೋದಿ ದೆಹಲಿ ವಿವಿಯಲ್ಲಿ ಪಡೆದ ಪದವಿಯ ಬಗ್ಗೆ ಕೇಜ್ರಿವಾಲ್ ಅನುಮಾನ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದರು. ಅನಂತರ ದೆಹಲಿ ವಿವಿ ಪದವಿ ಪಡೆದಿರುವುದು ಅಧಿಕೃತ ಎಂದು ಸ್ಪಷ್ಟಪಡಿಸಿತ್ತು.

Follow Us:
Download App:
  • android
  • ios