ಗುವಾಹಟಿ[ಫೆ.07]: ಲೋಕಸಭಾ ಚುನಾವಣೆ ಸನ್ನಿಹಿತವಾಗಿರುವ ಬೆನ್ನಲ್ಲೇ, ವಿವಿಧ ರಾಜ್ಯಗಳಲ್ಲಿ ಜನರ ಓಲೈಕೆಗಾಗಿ ಜನಪ್ರಿಯ ಬಜೆಟ್‌ ಮಂಡನೆ ಮುಂದುವರೆದಿದ್ದು, ಇದೀಗ ಅಸ್ಸಾಂ ಸರ್ಕಾರ, ನವ ವಧುವಿಗೆ ಮದುದವೆ ವೇಳೆ 1 ತೊಲ (11.66 ಗ್ರಾಂ) ಬಂಗಾರ ನೀಡುವುದಾಗಿ ಘೋಷಿಸಿದೆ.

ಬುಧವಾರ ಮಂಡನೆಯಾದ ಬಜೆಟ್‌ನಲ್ಲಿ ವಿತ್ತ ಸಚಿವ ಹಿಮಂತಾ ಬಿಸ್ವಾ ಶರ್ಮಾ ಈ ಘೋಷಣೆ ಮಾಡಿದ್ದಾರೆ. ಅಲ್ಲದೆ, ಬಡವರಿಗೆ ಅನುಕೂಲವಾಗುವಂತೆ 1 ರು.ನಂತೆ 1 ಕೆಜಿ ಅಕ್ಕಿ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.