ಗಂಡ ಅಡುಗೆ ಸರಿಯಿಲ್ಲವೆಂದರೆ ದೌರ್ಜನ್ಯವಲ್ಲ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 7, Aug 2018, 11:09 AM IST
Asking wife to cook well is not a harassment  says Bombay Highcourt
Highlights

ಪತಿ ತನ್ನ ಪತ್ನಿಗೆ ಅಡುಗೆ ಸರಿ ಮಾಡು ಅಥವಾ ಮಾಡಿದ ಅಡುಗೆ ರುಚಿಯಾಗಿಲ್ಲವೆನ್ನುವುದು ದೌರ್ಜನ್ಯವೆಲ್ಲವೆಂದು ಬಾಂಬೇ ಹೈ ಕೋರ್ಟ್ ಪ್ರಕರಣವೊಂದರ ವಿಚಾರಣೆ ನಡೆಸಿ, ತೀರ್ಪು ನೀಡಿದೆ. ಹಾಂಗಥ ಹೆಂಡತಿ ಏನೇ ಮಾಡಿದರೂ ಕಮೆಂಟ್ ಮಾಡುವುದು ಬೇಡ ಅನ್ಸುತ್ತೆ.

ಮುಂಬೈ: ಸರಿಯಾಗಿ ಅಡುಗೆ ಮಾಡು ಎಂದು ಪತ್ನಿಗೆ ಹೇಳುವುದು ದೌರ್ಜನ್ಯವಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪೊಂದರಲ್ಲಿ ತಿಳಿಸಿದೆ. 

ಸಾಂಗ್ಲಿ ನಿವಾಸಿ ವಿಜಯ್ ಶಿಂದೆ ಎಂಬಾತ 1998ರಲ್ಲಿ ವಿವಾಹವಾಗಿದ್ದು, ಆತನ ಪತ್ನಿ 2001ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಅಡುಗೆ ಸರಿಯಾಗಿ ಮಾಡಿಲ್ಲ ಎಂಬ ಕಾರಣಕ್ಕೆ ಜಗಳ ನಡೆದ ಬಳಿಕ, ಆತ್ಮಹತ್ಯೆಗೆ ಶರಣಾಗಿದ್ದಳು. 

ಸರಿಯಾಗಿ ಅಡುಗೆ ಮಾಡು ಎಂದು ಹೇಳುವುದು ದೌರ್ಜನ್ಯವಲ್ಲ ಎಂದ ಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿದೆ. 

loader