ಈ ಕುರಿತಂತೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅಶೋಕ್ ಪಂಡಿತ್ ಪಾಕಿಸ್ತಾನ ಕಲಾವಿದರನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡಿರುವ ನಿರ್ಮಾಪಕರನ್ನು ಸೇನೆಗೆ ರು.5 ಕೋಟಿ ಹಣ ನೀಡಿ ಎಂದು ಒತ್ತಡ ಹೇರುವುದು ಸರಿಯಲ್ಲ. 

ಮುಂಬೈ(ಅ.24): ಪಾಕಿಸ್ತಾನ ಕಲಾವಿದರೊಂದಿಗೆ ಕೆಲಸ ಮಾಡಿದರೆ ಭಾರತೀಯ ಸೇನೆಗೆ ರು.5 ಕೋಟಿ ಹಣವನ್ನು ನೀಡುವಂತೆ ಹೇಳಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಆಗ್ರಹದ ವಿರುದ್ಧ ನಿರ್ದೇಶಕ ಹಾಗ ನಿರ್ಮಾಪಕ ಅಶೋಕ್ ಪಂಡಿತ್ ಗರಂ ಆಗಿದ್ದಾರೆ.

ಈ ಕುರಿತಂತೆ ಟ್ವಿಟರ್ ನಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿರುವ ಅಶೋಕ್ ಪಂಡಿತ್ ಪಾಕಿಸ್ತಾನ ಕಲಾವಿದರನ್ನು ತಮ್ಮ ಚಿತ್ರದಲ್ಲಿ ಬಳಸಿಕೊಂಡಿರುವ ನಿರ್ಮಾಪಕರನ್ನು ಸೇನೆಗೆ ರು.5 ಕೋಟಿ ಹಣ ನೀಡಿ ಎಂದು ಒತ್ತಡ ಹೇರುವುದು ಸರಿಯಲ್ಲ. 

ಹೃದಯಪೂರ್ವಕವಾಗಿ ಸೇನೆಗೆ ಹಣ ನೀಡಬೇಕೇ ವಿನಃ, ಬಲವಂತ ಮಾಡಿ, ಒತ್ತಡ ಹೇರಿ ಹಾಗೂ ಸುಲಿಗೆ ಮಾಡುವ ಮೂಲಕವಲ್ಲ ಎಂದು ಬರೆದುಕೊಂಡಿದ್ದಾರೆ.