Asianet Suvarna News Asianet Suvarna News

ಕರ್ನಾಟಕದ ಲಾಟರಿ ಹಗರಣ ಸೇರಿದಂತೆ ದಕ್ಷಿಣ ಭಾರತಕ್ಕೆ ಶಾಕ್ ಕೊಟ್ಟ ಟಾಪ್ ಸುದ್ದಿಗಳು; ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ನ ದಿಟ್ಟ ಪತ್ರಿಕೋದ್ಯಮ

ಸುವರ್ಣನ್ಯೂಸ್ 2015ರಲ್ಲಿ ಬಯಲಿಗೆ ತಂದ 7 ಸಾವಿರ ಕೋಟಿಯ ಹಗರಣ ಕರ್ನಾಟಕದ ಲಾಟರಿಯದು. ಹಗರಣ ಒಂದು ತಾರ್ಕಿಕ ಅಂತ್ಯ ಬರುವವರೆಗೂ ನಿರಂತರವಾಗಿ ವರದಿ ಮಾಡಿದ ಶ್ರೇಯಸ್ಸು ಸುವರ್ಣನ್ಯೂಸ್'ನದ್ದು. 35ಕ್ಕೂ ಹೆಚ್ಚು ಪೊಲೀಸರು ಮತ್ತು ತೆರಿಗೆ ಅಧಿಕಾರಿಗಳು ಶಾಮೀಲಾಗಿದ್ದ ಹಗರಣವಿದು. ಹಗರಣದ ಕಿಂಗ್'ಪಿನ್, ಅಂತಾರಾಷ್ಟ್ರೀಯ ಕ್ರಿಮಿನಲ್ ಸ್ಯಾಂಟಿಯಾಗೋ ಮಾರ್ಟಿನ್ ಕೊನೆಗೂ ಜೈಲುಕಂಬಿ ಎಣಿಸುವಂತೆ ಮಾಡಿತು ಸುವರ್ಣನ್ಯೂಸ್.

asianet news networks biggest exposes that shook south india

ಬೆಂಗಳೂರು: ಸುವರ್ಣನ್ಯೂಸ್ ಸೇರಿದಂತೆ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ನ ವಾಹಿನಿಗಳು ಕಳೆದೊಂದು ದಶಕದಲ್ಲಿ ಎದೆಗಾರಿಕೆಯ ವರದಿಗಳಿಂದ ಜನರ ಮನಗೆದ್ದಿವೆ. ಕನ್ನಡದಲ್ಲಿ ಸುವರ್ಣನ್ಯೂಸ್ ಮತ್ತು ಮಲಯಾಳಂನಲ್ಲಿ ಏಷ್ಯಾನೆಟ್ ನ್ಯೂಸ್ ವಾಹಿನಿಗಳು ಬಹಳಷ್ಟು ಹಗರಣಗಳನ್ನು ಬಯಲಿಗಳೆದಿವೆ. ಜನಸಾಮಾನ್ಯರಿಗೆ ತೊಡಕಾದ ಅನೇಕ ಸಮಸ್ಯೆಗಳಿಗೆ ಈ ವಾಹಿನಿಗಳು ತಮ್ಮ ವರದಿಗಳಿಂದ ಪರಿಹಾರ ಕೊಡಿಸುವಲ್ಲಿ ಯಶಸ್ವಿಯಾಗಿವೆ. ಯಾವುದೇ ಪಕ್ಷ ಅಧಿಕಾರದಲ್ಲಿರಲಿ, ತಮ್ಮ ನೇರ, ದಿಟ್ಟ, ನಿರಂತರ ವರದಿಗಾರಿಕೆಯಿಂದ ಸರಕಾರಗಳನ್ನು ತಿದ್ದಿ, ತೀಡುವ ಕಾರ್ಯದಲ್ಲಿ ಏಷ್ಯಾನೆಟ್ ನ್ಯೂಸ್ ನೆಟ್ವರ್ಕ್'ನ ಸುದ್ದಿವಾಹಿನಿಗಳು ತೊಡಗಿವೆ. ಇಂಥ ಟಾಪ್ 3 ಸ್ಫೋಟಕ ಸುದ್ದಿಗಳು ಇಲ್ಲಿವೆ.

1) ಕರ್ನಾಟಕದ ಲಾಟರಿ ಹಗರಣ: ಸುವರ್ಣನ್ಯೂಸ್ 2015ರಲ್ಲಿ ಬಯಲಿಗೆ ತಂದ 7 ಸಾವಿರ ಕೋಟಿಯ ಹಗರಣವಿದು. ಹಗರಣ ಒಂದು ತಾರ್ಕಿಕ ಅಂತ್ಯ ಬರುವವರೆಗೂ ನಿರಂತರವಾಗಿ ವರದಿ ಮಾಡಿದ ಶ್ರೇಯಸ್ಸು ಸುವರ್ಣನ್ಯೂಸ್'ನದ್ದು. 35ಕ್ಕೂ ಹೆಚ್ಚು ಪೊಲೀಸರು ಮತ್ತು ತೆರಿಗೆ ಅಧಿಕಾರಿಗಳು ಶಾಮೀಲಾಗಿದ್ದ ಹಗರಣವಿದು. ಹಗರಣದ ಕಿಂಗ್'ಪಿನ್, ಅಂತಾರಾಷ್ಟ್ರೀಯ ಕ್ರಿಮಿನಲ್ ಸ್ಯಾಂಟಿಯಾಗೋ ಮಾರ್ಟಿನ್ ಕೊನೆಗೂ ಜೈಲುಕಂಬಿ ಎಣಿಸುವಂತೆ ಮಾಡಿತು ಸುವರ್ಣನ್ಯೂಸ್.

2) ವಯನಾಡ್ ಭೂಕಬಳಿಕೆ: ಕೇರಳದಲ್ಲಿ ದೊಡ್ಡ ಸಂಚಲನ ಮೂಡಿಸಿದ ಈ ಹಗರಣವನ್ನು ಬಯಲಿಗೆ ತಂದಿದ್ದು ಏಷ್ಯಾನೆಟ್ ನ್ಯೂಸ್. ವಯನಾಡ್ ಜಿಲ್ಲೆಯ ಮುತ್ತಂಗ ಆದಿವಾಸಿಗಳು ವಲಸಿಗರ ನಿರಂತರ ಅತಿಕ್ರಮಣದಿಂದ ತಮ್ಮ ಭೂಮಿ ಕಳೆದುಕೊಳ್ಳಬೇಕಾಯಿತು. ಹಾಗೂ ಹೀಗೂ ಸಂಘಟಿತರಾಗಿ ಈ ಆದಿವಾಸಿಗಳು ನಡೆಸಿ ಬೃಹತ್ ಪ್ರತಿಭಟನೆಯನ್ನು ಪೊಲೀಸರು ಗೋಲಿಬಾರ್ ನಡೆಸಿ ಹತ್ತಿಕ್ಕಿದರು. ಪೊಲೀಸರ ದೌರ್ಜನ್ಯಕ್ಕೆ ಆದಿವಾಸಿಗಳು ತತ್ತರಿಸಿಹೋದರು. ಏಷ್ಯಾನೆಟ್ ನ್ಯೂಸ್ ವಾಹಿನಿ ಮುತ್ತಂಗ ಆದಿವಾಸಿಗಳ ಪರ ನಿಂತು ನಿರಂತರವಾಗಿ ಸರಕಾರಕ್ಕೆ ತನ್ನ ವರದಿಗಳಿಂದ ಚಾಟಿ ಬೀಸಿತು.

3) ಇಸ್ರೋ ಬೇಹುಗಾರಿಕೆ ಪ್ರಕರಣ: ಇದೂ ಕೂಡ ಏಷ್ಯಾನೆಟ್ ನ್ಯೂಸ್ ವಾಹಿನಿ ಬಯಲಿಗೆ ತಂದ ದೊಡ್ಡ ಹಾಗೂ ಗಂಭೀರ ಹಗರಣ. ಬೇಹುಗಾರಿಕೆ ಆರೋಪದ ಮೇಲೆ ಇಸ್ರೋದ ಹಿರಿಯ ವಿಜ್ಞಾನಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ, ವಾಸ್ತವ ಬೇರೆಯೇ ಇತ್ತು. ಏಷ್ಯಾನೆಟ್ ನ್ಯೂಸ್ ತನ್ನ ತನಿಖಾ ವರದಿಗಳಿಂದ ನಿಜಾಂಶಗಳನ್ನು ಬಯಲಿಗೆ ತಂದಿತು. ಪೊಲೀಸರ ಆರೋಪಗಳು ಸತ್ಯಕ್ಕೆ ದೂರವಾಗಿದ್ದವು. ಪ್ರಕರಣದ ತನಿಖೆ ನಡೆಸಿದ ಸಿಬಿಐ ಕೂಡ ಇಸ್ರೋ ವಿಜ್ಞಾನಿಗಳ ನಿರಪರಾಧವನ್ನು ಎತ್ತಿಹಿಡಿಯಿತು. ಸುಪ್ರೀಂಕೋರ್ಟ್ ಕೂಡ ಹಿರಿಯ ವಿಜ್ಞಾನಿಗಳನ್ನು ದೋಷಮುಕ್ತಗೊಳಿಸಿತು. ಮಾನವ ಹಕ್ಕು ಆಯೋಗವು ಕೇರಳ ಸರಕಾರಕ್ಕೆ ಚಾಟಿ ಬೀಸಿ, ಸಂತ್ರಸ್ತ ವಿಜ್ಞಾನಿಗಳಿಗೆ ಪರಿಹಾರ ಕೊಡಿಸಿತು.

Follow Us:
Download App:
  • android
  • ios