ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಶ್ವಿನಿ ಅಂಗಡಿ

Ashwini Angadi Married M Veeresh
Highlights

ವಿಶ್ವಸಂಸ್ಥೆಯ ಯೂತ್ ಕರೇಜ್ ಪ್ರಶಸ್ತಿ ವಿಜೇತೆ ಅಶ್ವಿನಿ ಅಂಗಡಿ ಅವರು ಶಿಕ್ಷಕ ಎಂ.ವೀರೇಶ್ ಅವರೊಂದಿಗೆ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಬೆಂಗಳೂರು :  ವಿಶ್ವಸಂಸ್ಥೆಯ ಯೂತ್ ಕರೇಜ್ ಪ್ರಶಸ್ತಿ ವಿಜೇತೆ ಅಶ್ವಿನಿ ಅಂಗಡಿ ಅವರು ಶಿಕ್ಷಕ ಎಂ.ವೀರೇಶ್ ಅವರೊಂದಿಗೆ ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಸವನಗುಡಿಯ ವಾಸವಿ ಕನ್ವೆನ್ಷನ್ ಹಾಲ್‌ನಲ್ಲಿ ಶುಕ್ರವಾರ ನಡೆದ ವಿವಾಹ  ಮಹೋತ್ಸವ  ದಲ್ಲಿ ಅಶ್ವಿನಿ ಅಂಗಡಿ ಮತ್ತು ಎಂ.ವೀರೇಶ್ ತಮ್ಮ  ಕುಟುಂಬದವರು, ಸ್ನೇಹಿತರು, ಸಹಪಾಠಿಗಳು ಬಂಧು -ಬಳಗದ ಸಮ್ಮುಖದಲ್ಲಿ ದಾಂಪತ್ಯಕ್ಕೆ ಕಾಲಿಟ್ಟರು.

ಸ್ವತಃ ಅಂಧರಾಗಿದ್ದರೂ ತನ್ನಂತಹ ಅಂಗವಿಕಲರ ಬಾಳಿಗೆ ಬೆಳಕಾಗುವ ಸದುದ್ದೇಶದಿಂದ ‘ಬೆಳಕು ಅಕಾಡೆಮಿ’ ಸ್ಥಾಪಿಸಿ ನಿರಂತರ ಸೇವೆ ಸಲ್ಲಿಸುತ್ತಿರುವ ಅಶ್ವಿನಿ ಅಂಗಡಿ ಅವರು ದಾವಣಗೆರೆ ಜಿಲ್ಲೆಯ ದೊಡ್ಡಬಾತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ವೀರೇಶ್ ಅವರ ಕೈ ಹಿಡಿದರು. ದಾವಣಗೆರೆ ಮೂಲದವರಾದ ವೀರೇಶ್ ಇಂಗ್ಲಿಷ್ ಎಂಎ ಸ್ನಾತಕೋತ್ತರ ಪದವೀಧರರಾಗಿದ್ದಾರೆ.

loader