ಇಂದು ಬೆಳಿಗ್ಗೆ  11.04 ಗಂಟೆಗೆ ಈ ಟ್ವೀಟನ್ನು ಮಾಡಿದ್ದು, ಇದಕ್ಕೆ 5494 ಮಂದಿ ರೀಟ್ವೀಟ್ ಮಾಡಿದ್ದರೆ, 11348 ಮಂದಿ ಲೈಕ್ ಮಾಡಿದ್ದಾರೆ.

ಚೆನ್ನೈ(ಫೆ.06): ಭಾರತ ಕ್ರಿಕೆಟ್ ತಂಡದ ಖ್ಯಾತ ಆಫ್ ಸ್ಪಿನ್ನರ್ ರವಿರಂದ್ರನ್ ಅಶ್ವಿನ್ಭಾವಿ ಮುಖ್ಯಮಂತ್ರಿ ಶಶಿಕಲಾ ಅವರ ಬಗ್ಗೆ ಮಾಡಿರುವ ಟ್ವೀಟ್ ಸಾರ್ವಜನಿಕ ವಲಯದಲ್ಲಿ ಕೋಲಹಲಕ್ಕೆ ಕಾರಣವಾಗಿದೆ.

'ತಮಿಳುನಾಡಿನ ಎಲ್ಲ ಯುವಕರ ಗಮನಕ್ಕೆ ಶೀಘ್ರದಲ್ಲೇ234 ಉದ್ಯೋಗಾವಕಾಶಗಳು ಆರಂಭವಾಗಲಿವೆ' ಎಂದು ತಮ್ಮಅಕೌಂಟ್'ನಲ್ಲಿ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ತಮಿಳುನಾಡಿನಲ್ಲಿ ಶೀಘ್ರದಲ್ಲೇ 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ' ಎಂಬ ಅರ್ಥ ಬಿಂಬಿಸುತ್ತದೆ.

ಇಂದು ಬೆಳಿಗ್ಗೆ11.04 ಗಂಟೆಗೆ ಈ ಟ್ವೀಟನ್ನು ಮಾಡಿದ್ದು, ಇದಕ್ಕೆ 5494 ಮಂದಿ ರೀಟ್ವೀಟ್ ಮಾಡಿದ್ದರೆ, 11348 ಮಂದಿ ಲೈಕ್ ಮಾಡಿದ್ದಾರೆ. ಟ್ವೀಟ್'ನಲ್ಲಿ ಪರ ವಿರೋಧದ ಮಾತುಗಳು ಚರ್ಚೆಯಾಗಿವೆ. ಹೆಚ್ಚು ವಿರೋಧದ ಮಾತುಗಳು ವ್ಯಕ್ತವಾದಾಗ 1.28 ಗಂಟೆಗೆಮತ್ತೊಂದು ಟ್ವೀಟ್ ಮಾಡಿರುವ ಅಶ್ವಿನ್'ಸಮಾಧಾನವಾಗಿರಿ ಸ್ನೇಹಿತರೆ, ಇದು ಉದ್ಯೋಗ ಸೃಷ್ಟಿಸುವ ಮಾತುಗಳು ರಾಜಕೀಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಅಶ್ವಿನ್ ದ್ವಂದ್ವ ಮಾತುಗಳಷ್ಟೆ ಅಲ್ಲ. ಡಿಎಂಕೆ ನಾಯಕ ಕರುಣಾನಿಧಿ, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಮುಖಂಡರು ಕೂಡ ಏನು ರಾಜಕೀಯ ಅನುಭವವಿಲ್ಲದ ಶಶಿಕಲಾ ಅವರನ್ನು ಮುಖ್ಯಮಂತ್ರಿಯಾಗುವುದಕ್ಕೆ ವಿರೋಧಿಸುತ್ತಿದ್ದಾರೆ.

ಓ. ಪನ್ನೀರ್ ಸೆಲ್ವಂ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಆಡಳಿತರೂಢ ಎಐಎಡಿಎಂಕೆ ಪಕ್ಷ ವಿಕೆ ಶಶಿಕಲಾ ಅವರನ್ನು ತಮಿಳುನಾಡು ಶಾಸಕಾಂಗ ನಾಯಕಿಯನ್ನಾಗಿ ಆಯ್ಕೆ ಮಾಡಿದ್ದು, ನಾಳೆ ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.