ಇಟಾನಗರ[ಮೇ.21]: ಅರುಣಾಚಲ ಪ್ರದೇಶದಲ್ಲಿ NSCN ಉಗ್ರರು ನಡೆಸಿದ ದಾಳಿಯಲ್ಲಿ ಓರ್ವ ಶಾಸಕ ಸೇರಿ ಒಟ್ಟು 7 ಮಂದಿ ಬಲಿಯಾಗಿದ್ದಾರೆ. 

ಅರುಣಾಚಲ ಪ್ರದೇಶದ ತಿರಪ್ ಜಿಲ್ಲೆಯ ಬೋಗ್ಪಾನಿ ಹಳ್ಳಿಯಲ್ಲಿ ನಡೆದ ದಾಳಿಯಲ್ಲಿ NNP ಶಾಸಕ ತಿರೋಂಗ್ ಅಬೆ ಸೇರಿ ಒಟ್ಟು  7 ಮಂದಿ ಸಾವನ್ನಪ್ಪಿದ್ದಾರೆ. ದಾಳಿಯ ಹಿಂದೆ NSCN[ನ್ಯಾಷನಲ್ ಸೋಶಿಯಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್] ಉಗ್ರ ಸಂಘಟನೆ ಇದೆ ಎಂಬ ಅನುಮಾನ ವ್ಯಕ್ತವಾಗಿದೆ. 

ಚುನಾವಣಾ ಫಲಿತಾಂಶಕ್ಕೂ ಮೊದಲೇ ನಡೆದ ಈ ದಾಳಿ ಭಾರೀ ಆತಂಕ ಸೃಷ್ಟಿಸಿದೆ.