ಭಾರತದ ಅಕ್ರಮ ಆಳ್ವಿಕೆಯಿಂದ ದಕ್ಷಿಣ ಟಿಬೆಟ್ ಜನರು ಕಷ್ಟವನ್ನನುಭವಿಸುತ್ತಿದ್ದಾರೆ. ಅವರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ, ಅಲ್ಲಿನ ಜನರು ಚೀನಾಗೆ ಸೇರುವುದನ್ನು ನಿರೀಕ್ಷಿಸುತ್ತಿದ್ದಾರೆ, ಎಂದು ಚೀನಾ ಡೈಲಿಯು ಕ್ಯಾತೆ ತೆಗೆದಿದೆ.

ಬೀಜಿಂಗ್ (ಏ.12): ಅರುಣಾಚಲ ಪ್ರದೇಶಕ್ಕೆ ಟಿಬೆಟಿಯನ್ ಬೌದ್ಧ ಗುರು ದಲಾಯಿ ಲಾಮಾ ಭೇಟಿ ನೀಡಿರುವುದನ್ನು ಟೀಕಿಸಿರುವ ಚೀನಾದ ಸರ್ಕಾರಿ ಸ್ವಾಮ್ಯದ ಪತ್ರಿಕೆ, ಅರುಣಾಚಲ ಪ್ರದೇಶ ಜನರು ಭಾರತದ ‘ಅಕ್ರಮ’ ಆಳ್ವಿಕೆಯಿಂದ ಬೇಸತ್ತಿದ್ದಾರೆ ಎಂದು ಹೇಳಿದೆ.

ಭಾರತದ ಅಕ್ರಮ ಆಳ್ವಿಕೆಯಿಂದ ದಕ್ಷಿಣ ಟಿಬೆಟ್ ಜನರು ಕಷ್ಟವನ್ನನುಭವಿಸುತ್ತಿದ್ದಾರೆ. ಅವರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ, ಅಲ್ಲಿನ ಜನರು ಚೀನಾಗೆ ಸೇರುವುದನ್ನು ನಿರೀಕ್ಷಿಸುತ್ತಿದ್ದಾರೆ, ಎಂದು ಚೀನಾ ಡೈಲಿಯು ಕ್ಯಾತೆ ತೆಗೆದಿದೆ.

ಟಿಬೆಟಿಯನ್ ಧರ್ಮಗುರು ದಲಾಯಿ ಲಾಮಾ ಕಳೆದ ವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಚೀನಾ ಅದನ್ನು ವಿರೋಧಿಸುತ್ತಲೇ ಬಂದಿದೆ. ಭಾರತವು ಪ್ರಮಾದವೆಸಗುತ್ತಿದೆಯೆಂದು ಹೇಳಿರುವ ಚೀನಾ ಭಾರತದ ಕ್ರಮವು ದ್ವಿಪಕ್ಷೀಯ ಸಂಬಂಧಗಳ ಮೇಲೆ ಗಂಭೀರ ದುಷ್ಪರಿಣಾಮಗಳನ್ನು ಬೀರಲಿದೆ ಎಂದು ಚ್ಚರಿಸಿದೆ.

ಎ.4 ರಿಂದ ಒಂದು ವಾರಗಳ ಕಾಲ ದಲಾಯಿ ಲಾಮಾ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದು, ಟಿಬೆಟಿಯನ್ ಬೌದ್ಧರ 6ನೇ ಧರ್ಮಗುರು ಸ್ಯಾಂಗ್ಯಾಂಗ್ ಗ್ಯಾಸ್ಟೋ ಅವರ ಜನ್ಮಸ್ಥಳವಾದ ತವಾಂಗ್’ಗೂ ಭೇಟಿ ನೀಡಿದ್ದರು.

ಟಿಬೆಟಿಯನ್ ಬೌದ್ಧರ 14ನೇ ಧರ್ಮಗುರು (ದಲಾಯಿ ಲಾಮಾ) ವಾಗಿರುವ ತೆಂಝಿನ್ ಗ್ಯಾಸ್ಟೋ ಅವರನ್ನು ಚೀನಾವು ಪ್ರತ್ಯೇಕವಾದಿಯಾಗಿ ಕಾಣುತ್ತದೆ ಹಾಗೂ ಅರುಣಾಚಲ ಪ್ರದೇಶ ತನಗೆ ಸೇರಿದ್ದು ಎಂದು ಕ್ಯಾತೆ ತೆಗೆಯುತ್ತಾ ಬಂದಿದೆ.