ಕಾಂಗ್ರೆಸ್ ನಿಂದ ಸುಳ್ಳುಗಳ ಮಾರಾಟ : ಜೇಟ್ಲಿ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Aug 2018, 11:55 AM IST
Arun Jaitley Slams Congress
Highlights

 ಯುಪಿಎ ಸರ್ಕಾರ 2007 ರಲ್ಲಿ ಚೌಕಾಸಿ ಮಾಡಿದ್ದಕ್ಕಿಂತ ಶೇ.20 ರಷ್ಟು ಕಡಿಮೆ ಬೆಲೆಗೆ ರಫೇಲ್ ವಿಮಾನ ಖರೀದಿಸಲಾಗುತ್ತಿದೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್ ಸುಳ್ಳುಗಳನ್ನು ಮಾರಾಟ ಮಾಡುತ್ತಿದೆ ಎಂದು ಅರುಣ್ ಜೇಟ್ಲಿ ವಾಗ್ದಾಳಿ ನಡೆಸಿದ್ದಾರೆ. 
 

ನವದೆಹಲಿ: ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತಂತೆ ಕಾಂಗ್ರೆಸ್ ಪಕ್ಷ ಸುಳ್ಳುಗಳನ್ನು ಮಾರಾಟ ಮಾಡುತ್ತಿದೆ ಎಂದು ದೂರಿರುವ ಹಣಕಾಸು ಸಚಿವ ಅರುಣ್ ಜೇಟ್ಲಿ, ಯುಪಿಎ ಸರ್ಕಾರ 2007 ರಲ್ಲಿ ಚೌಕಾಸಿ ಮಾಡಿದ್ದಕ್ಕಿಂತ ಶೇ.20 ರಷ್ಟು ಕಡಿಮೆ ಬೆಲೆಗೆ ರಫೇಲ್ ವಿಮಾನ ಖರೀದಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಎಎನ್‌ಐಗೆ ಸಂದರ್ಶನ ನೀಡಿರುವ ಅವರು, ಭಾರತ ಖರೀದಿಸಲು ಉದ್ದೇಶಿಸಿರುವ ವಿಮಾನಗಳು ಸುಸಜ್ಜಿತ (‘ಫುಲ್ಲಿ ಲೋಡೆಡ್’). ವಿಮಾನ ಖರೀದಿಗಾಗಿ ಸರ್ಕಾರ-ಸರ್ಕಾರಗಳ ನಡುವೆ ನೇರ ಮಾತುಕತೆ ನಡೆದಿದೆ.

ಯುಪಿಎಗಿಂತ ಶೇ. 20 ಕಡಿಮೆ ಬೆಲೆಗೆ ವಿಮಾನ ಖರೀದಿಸಲಾಗುತ್ತಿದೆ ಎಂದಿದ್ದಾರೆ. ಫೇಸ್ ಬುಕ್‌ನಲ್ಲೂ ಲೇಖನ ಬರೆದಿರುವ ಜೇಟ್ಲಿ, ರಾಹುಲ್ ಗಾಂಧಿಗೆ 15 ಪ್ರಶ್ನೆಗಳನ್ನು ಕೇಳಿ, ರಾಹುಲ್ ರಫೇಲ್ ಖರೀದಿಯನ್ನು ‘ಕಿಂಡರ್ ಗಾರ್ಟನ್ ಶಾಲೆ’ಗಳಲ್ಲಿ ನಡೆವ ಚರ್ಚೆಯನ್ನಾಗಿ ಮಾರ್ಪ ಡಿಸಿದ್ದಾರೆ ಎಂದೂ ಕುಟುಕಿದ್ದಾರೆ. ಆದರೆ ಇದಕ್ಕೆ ರಾಹುಲ್ ಟ್ವೀಟರಲ್ಲಿ ತಿರುಗೇಟು ನೀಡಿ, ‘ಮೋದಿಯೇ ಸ್ನೇಹಿತರನ್ನು ರಕ್ಷಿಸುತ್ತಿದ್ದಾರೆ’ ಎಂದಿದ್ದಾರೆ.

loader