ನವದೆಹಲಿ: ದೇಶದ ಪ್ರತಿಯೊಬ್ಬ ಪ್ರಜೆಯೂ ತಮ್ಮ ಪಾಲಿನ ತೆರಿಗೆಯನ್ನು ಪಾವತಿಸಿ ಸರ್ಕಾರವು ತನ್ನ ಆದಾಯಕ್ಕಾಗಿ ತೈಲದ ಮೇಲೆ ಅವಲಂಬಿತ ವಾಗುವುದನ್ನು ಕಡಿಮೆಗೊಳಿಸಬೇಕು ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಹೇಳಿದ್ದಾರೆ. 

ಈ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಡಿಮೆ ಮಾಡಲು ಅಸಾಧ್ಯ ಎಂಬುದಾಗಿ ಅವರು ಪರೋಕ್ಷವಾಗಿ ಹೇಳಿದ್ದಾರೆ. ಸೋಮವಾರ ಈ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಬರೆದುಕೊಂಡಿರುವ ಅವರು, ಮಾಸಿಕ ವೇತನ ಪಡೆಯುವ ಬಹುತೇಕ ನೌಕರರು ತಮ್ಮ ಪಾಲಿನ ತೆರಿಗೆಯನ್ನು ಪಾವತಿಸುತ್ತಿದ್ದಾರೆ. ಇತರ ವರ್ಗ ಗಳು ಸಹ ತೆರಿಗೆ ಪಾವತಿಸಬೇಕು ಎಂದರು.